ಉಡುಪಿ ಜಿಲ್ಲೆ ಎಲ್ಲೂರಿನಿಂದ ದ ಕ ಜಿಲ್ಲೆ ಪುಣಚತನಕ ಕೇರಳಕ್ಕೆ ಸಾಗಲಿರುವ 400 ಕೆ ವಿ ವಿದ್ಯುತ್ ಲೈನ್ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗದರ್ಶಿ ಸೂತ್ರದ ಪ್ರಕಾರ ರೈತರಿಗೆ ಯೋಜನೆ ಬಗ್ಗೆ ಪೂರ್ವ ಮಾಹಿತಿ ನೀಡದೆ ಕಾಮಗಾರಿ ನಡೆಸುವಂತಿಲ್ಲ ಎಸ್‌ಒಪಿ. ಆದರೆ ಯೋಜನೆಯ ಈ ಕಾಮಗಾರಿ ರೈತರ ಕೃಷಿ ಭೂಮಿಯಲ್ಲಿ ಯಾವುದೇ ಪೂರ್ವ ಮಾಹಿತಿ ನೀಡದೇ ನಡೆಯುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ,.ಎಂ.ಫಿ. ಅವರಿಗೆ ಲಿಖಿತ ಮನವಿಯನ್ನು ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲು ಗು ತ್ತು ನೇತೃತ್ವದ ರೈತರ ನಿಯೋಗ ನೀಡಿತು.
ಮಂಗಳೂರು ಅಧ್ಯಕ್ಷ ದಯಾನಂದ ಶೆಟ್ಟಿ ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎo. ಸುಬ್ರಹ್ಮಣ್ಯ ಭಟ್. ವಿಟ್ಲ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಹಾಗೂ ಸಂತ್ರಸ್ತ ರೈತರು ಉಪಸ್ಥಿತರಿದ್ದರು ಮನವಿಗೆ ಸ್ಪಂದಿಸಿ ಜಿಲ್ಲಾಧಿಕಾರಿಗಳು ಗುತ್ತಿಗೆ ಕಾಮಗಾರಿ ಕಂಪನಿಗೆ ಎಸ್ ಓ ಪಿ ಪಾಲಿಸುವಂತೆ ನಿರ್ದೇಶಿಸುವುದಾಗಿ ತಿಳಿಸಿದರು.