Sunday, July 14, 2024
Homeರಾಜ್ಯಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ಬೋಟ್ ಹಾಗೂ ಮೀನುಗಾರರ ರಕ್ಷಣೆ

ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ಬೋಟ್ ಹಾಗೂ ಮೀನುಗಾರರ ರಕ್ಷಣೆ

ಕುಂದಾಪುರ ಬಳಿ ಅರಬ್ಬಿ ಸಮುದ್ರದಲ್ಲಿ ನಡೆದ ಘಟನೆ ಹಾನಿಗೀಡಾಗಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ಬೋಟ್ ಬೊಟಿನಲ್ಲಿದ್ದ 8 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆಯಿಂದ ರಕ್ಷಣೆ ಮಾಡಲಾಗಿದೆ.

ಕಲ್ಮಾಡಿಯ ಪ್ಯಾರು ಎಸ್. ಎಂಬವರ ಬೋಟಿನ ತಳಬಾಗವು ಒಡೆದು ನೀರು ಒಳನುಗ್ಗಲಾರಂಭಿಸಿತು, ಬೋಟ್ ನಲ್ಲಿದ್ದ ಮೀನುಗಾರರು ಕರಾವಳಿ ಭದ್ರತಾ ಪೊಲೀಸ್ ಗೆ ಮಾಹಿತಿ ನೀಡಿದ್ದರು.

ಸಮುದ್ರದಲ್ಲಿ ಗಸ್ತಿನಲ್ಲಿದ್ದ ರಾಜ್‌ದೂತ್‌ ಮತ್ತು ಗೋಲ್ಡ್ ಫಿಶ್ ಎಂಬ ಎರಡು ನೌಕೆಗಳ ಸಹಾಯದಿಂದ ಸಬ್‌ಮರ್ಸಿಬಲ್ ಪಂಪ್‌ಗಳನ್ನು ಬಳಸಿಕೊಂಡು ಮೀನುಗಾರಿಕಾ ಬೋಟಿನೊಳಗೆ ತುಂಬುತಿದ್ದ ನೀರನ್ನು ಖಾಲಿ ಮಾಡಿ ರಕ್ಷಣೆ ಮಾಡಲಾಗಿದೆ.

ಸಮೀಪದ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಬೋಟ್ ರವಾನೆ ಮಾಡಿದ್ದು, ಬೋಟಿನಲ್ಲಿದ್ದ 8 ಮಂದಿ ಮೀನುಗಾರರು ಸುರಕ್ಷಿತರಾಗಿದ್ದಾರೆ.

RELATED ARTICLES
- Advertisment -
Google search engine

Most Popular