Wednesday, January 15, 2025
HomeUncategorizedಕೊಂಕಣಿಯ ವಿಶಿಷ್ಟ ಸ್ವರಗಳ ಸಂಶೋಧನಾ ದಾಖಲೀಕರಣ

ಕೊಂಕಣಿಯ ವಿಶಿಷ್ಟ ಸ್ವರಗಳ ಸಂಶೋಧನಾ ದಾಖಲೀಕರಣ

ಕೊಂಕಣಿ ಮಾತೃಭಾಷಿಕ ಜನರು ತಮ್ಮ ದೈನಂದಿನ ಸಂಭಾಷಣೆಗಳಲ್ಲಿ, ಸರಳ ವ್ಯಾಕರಣ ವ್ಯಾಪ್ತಿಯಲ್ಲಿ ಬರುವ ಎಂಟು ಮೂಲ ಹೃಸ್ವಸ್ವರಗಳ ಹೊರತಾಗಿ ಆರು ವಿಶೇಷ ಸ್ವರಗಳನ್ನೂ ಬಳಸುತ್ತಿರುವ ವಿಚಾರವನ್ನು ಅಂತರಾಷ್ಟೀಯ ದ್ವನಿ ಸಂಕೇತಗಳ (ಐ.ಪಿ.ಎ.) ಮೂಲಕ ಶ್ರುತಪಡಿಸಲಾಗಿದೆ. ವಿಶ್ವ ಕೊಂಕಣಿ ಕೇಂದ್ರದ ದೀರ್ಘಕಾಲೀನ ಸಂಶೋಧನಾ ಯೋಜನೆ-“ಎ ಲಿಂಗ್ವಿಸ್ಟಿಕ್ ಸ್ಟಡಿ ಆಫ್ ಕೊಂಕಣಿ” ಯ ಪ್ರಯುಕ್ತ ಕೇಂದ್ರದ ಅಧ್ಯಕ್ಷ ಸಿ ಎ ನಂದಗೋಪಾಲ ಶೆಣೈಯವರ ಉಸ್ತುವಾರಿಯಲ್ಲಿ ನಡೆದ ಒಂದು ದಿನದ ‘ಕ್ಷೇತ್ರ ತಿಳುವಳಿಕೆದಾರರ’ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಗೋವಾ ವಿಶ್ವವಿದ್ಯಾನಿಲಯದ ಪ್ರೊ ಡೇನಿಸ್ ವಾಜ್ ಮಾರ್ಗದರ್ಶನದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಡಾ ಬಿ ದೇವದಾಸ ಪೈ ಯವರು ಈ ಬಗ್ಗೆ ಸಾವಿರಾರು ದೈನಂದಿನ ಕೊಂಕಣಿ ಶಬ್ಧಗಳ ಪಟ್ಟಿಯೊಂದಿಗೆ ವಿಸ್ತ್ರತ ವಿಚಾರ ಮಂಡನೆ ನಡೆಸಿ ಕೊಟ್ಟರು. ಈ ಸಂಶೋಧನೆಯ ಬಗ್ಗೆ ನಿರಂತರ ಜನಸಂಪರ್ಕ, ಮಾತಿನ ಆಡು ಭಾಷೆಯ ದ್ವನಿ ವಿಶ್ಲೇಷಣೆ, ಮಾಹಿತಿದಾರರ ಸಭೆ, ಸಂಶೋಧನಾ ನಿಯತ ಕಾಲಿಕಗಳಲ್ಲಿ ಲೇಖನಗಳ ಪ್ರಕಟಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕೇಂದ್ರದಲ್ಲಿ ಆಯೋಜಿಸಲಾಗುವುದು. ಭಾಷಾವಿಜ್ಜಾನದಲ್ಲಿ ದ್ವನಿ-ಉಚ್ಚಾರ ವಿಭಾಗಕ್ಕೆ ಸಂಬಂಧಿಸಿದ ಪ್ರಥಮ ಖಂಡ – ಸ್ವನವಿಜ್ಞಾನ (ಫೊನಾಲೊಜಿ)ದ ಮೇಲಿನ ಪ್ರಥಮ ಸಭೆಯಲ್ಲಿ ಕೊಂಕಣಿ ಮನೆ ಮಾತಿನ ಸಮರ್ಥ ತಿಳುವಳಿದಾರ (ಇನ್ಫೊರ್ಮೆಂಟ್ಸ್) ರಾಗಿ ಚಂದ್ರಿಕಾ ಮಲ್ಲ್ಯ, ಸಬಿತಾ ಕಾಮತ್, ವಸುಧಾ ಬಾಳಿಗಾ, ವಿಮಲಾ ಕಾಮತ್ ಮುಂತಾದ ಪ್ರಮುಖರು ಭಾಗವಹಿಸಿದರು.

RELATED ARTICLES
- Advertisment -
Google search engine

Most Popular