Thursday, September 12, 2024
Homeರಾಜ್ಯಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಐಎಎಸ್​ ಅಧಿಕಾರಿಯಾದ ಸೌಮ್ಯ : ಪ್ರಯತ್ನಶೀಲ ವ್ಯಕ್ತಿತ್ವ

ಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಐಎಎಸ್​ ಅಧಿಕಾರಿಯಾದ ಸೌಮ್ಯ : ಪ್ರಯತ್ನಶೀಲ ವ್ಯಕ್ತಿತ್ವ

ನವದೆಹಲಿ :ಸೌಮ್ಯ ಶರ್ಮಾ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಐಎಎಸ್ ಅಧಿಕಾರಿಯಾಗಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲೇ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡರೂ ಎದೆಗುಂದದೆ ಸೌಮ್ಯ ಐಎಎಸ್ ಅಧಿಕಾರಿಯಾದವರು. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸೌಮ್ಯ ಶರ್ಮಾ 2018ರಲ್ಲಿ 9ನೇ ರ‍್ಯಾಂಕ್ ನೊಂದಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆದವರು. ಸೌಮ್ಯಾ ಅವರು UPSC ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಪಾಸ್ ಮಾಡಿದ್ದು ಮಾತ್ರವಲ್ಲದೆ ಆ ಪರೀಕ್ಷೆಗೆ ಅವರು ಯಾವುದೇ ತರಬೇತಿಯನ್ನೂ ಪಡೆದಿರಲಿಲ್ಲ.

ಹಾಗೇ, ಕೇವಲ 4 ತಿಂಗಳು ಪರೀಕ್ಷೆಗೆ ತಯಾರಿ ಮಾಡಿಕೊಂಡು ಯುಪಿಎಸ್ಸಿ ಪರೀಕ್ಷೆ ಕಠಿಣವಲ್ಲ ಎಂಬ ಸಂದೇಶ ಸಾರಿದ್ದಾರೆ. ಸೌಮ್ಯಾ ತನ್ನ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಾಗ ಅವರಿಗೆ ಕೇವಲ 16 ವರ್ಷ. ಅಂಗವೈಕಲ್ಯವಿರುವ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಆದರೆ, ಸೌಮ್ಯ ತನ್ನ ದೈಹಿಕ ನ್ಯೂನತೆಯನ್ನು ಸವಾಲಾಗಿ ಸ್ವೀಕರಿಸಿದವರು ಸೌಮ್ಯ. ತನ್ನ ಜೀವನದುದ್ದಕ್ಕೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಸೌಮ್ಯಾ ತನ್ನ ಶಾಲಾ ಶಿಕ್ಷಣದ ನಂತರ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಪದವಿ ಮುಂದುವರಿಸಲು ಸೀಟು ಪಡೆದರು. 2017ರಲ್ಲಿ ಅವರು UPSC ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು ಆದರೆ ಪರೀಕ್ಷೆಗೆ ಕೇವಲ 4 ತಿಂಗಳುಗಳು ಉಳಿದಿತ್ತು. ಆದರೆ, ಸೌಮ್ಯ ನಾಲ್ಕೇ ತಿಂಗಳಲ್ಲಿ ಯಾವುದೇ ತರಬೇತಿ ಇಲ್ಲದೆ ಸ್ವಂತವಾಗಿ ಓದಿಕೊಂಡು, ಪರೀಕ್ಷೆ ಬರೆದು 9ನೇ ರ‍್ಯಾಂಕ್ ಪಡೆದರು.

ಸೌಮ್ಯ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಆಗ ಅವರಿಗೆ ಕೇವಲ 23 ವರ್ಷ. ಆದರೆ, ಸೌಮ್ಯ ಯಾವ ಕೋಟಾದಲ್ಲೂ ಸೀಟು ಗಿಟ್ಟಿಸಿಕೊಳ್ಳಲಿಲ್ಲ. ಅವರು ಜನರಲ್ ಕೆಟಗರಿಯಲ್ಲೇ ಪರೀಕ್ಷೆ ಬರೆದು, ಸ್ವಂತ ಸಾಮರ್ಥ್ಯದಿಂದ ಪಾಸ್ ಆಗಿದ್ದಾರೆ. ಸೌಮ್ಯ ಶರ್ಮಾ ಅವರು ಪ್ರಸ್ತುತ ಮಹಾರಾಷ್ಟ್ರ ಕೇಡರ್‌ನಲ್ಲಿ ನಾಗ್ಪುರ ಜಿಲ್ಲಾ ಪರಿಷತ್‌ನ ಸಿಇಒ ಆಗಿ ನೇಮಕವಾಗಿದ್ದಾರೆ. ನಾಗ್ಪುರದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಅರ್ಚಿತ್ ಚಂದಕ್ ಅವರನ್ನು ವಿವಾಹವಾಗಿದ್ದಾರೆ.

RELATED ARTICLES
- Advertisment -
Google search engine

Most Popular