ಕಾಂಗ್ರೆಸ್ ಕಾರ್ಯ ಯಶವಂತ ಪ್ರಭು ಮೇಲೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಗೂಂಡಾಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ಹಾಗೂ ಸುಳ್ಳು ಜಾತಿ ನಿಂಧನೆ ಕೇಸ್ ದಾಖಲಿಸಿದ ವಿರುದ್ಧ ಇಂದು ಕದ್ರಿ ದೇವಸ್ಥಾನದಲ್ಲಿ ಸತ್ಯಾಸತ್ಯತೆಯನ್ನು ದೇವರು ಇತ್ಯರ್ಥ ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ರ‍್ಗದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ, ಬ್ಲಾಕ್ ಕಾಂಗ್ರೆಸ್ ಕರ‍್ಯರ‍್ಶಿ ಗಿರೀಶ್ ಶೆಟ್ಟಿ, ಕಾಂಗ್ರೆಸ್ ವಕ್ತಾರದ ಸುನೀಲ್ ಬಜಿಲಕೆರಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಲ್ವಿನ್ ಕ್ಯಾಸ್ಟಲಿನೋ, ವರ‍್ಡ್ ಅಧ್ಯಕ್ಷರಾದ ದಯಾನಂದ್, ಮಾಜಿ ಕರ‍್ಪೋರೇಟರ್ ಕೇಶವ ಮರೋಳಿ, ದಿನೇಶ್ ಬಿಜೈ, ದೇವಿ ಪ್ರಸಾದ್ ಕದ್ರಿ, ಶಾಂತಲಾ ಗಟ್ಟಿ, ವಿಕಾಸ್ ಶೆಟ್ಟಿ, ರಾಜೇಶ್ ಬೆಂಗರೆ, ನೀರಜ್ ಪಾಲ್, ಚಂದ್ರ ಕಲಾ ರಾವ್, ಮೀನಾ ಟೆಲಿಸ್ ಮುಂತಾದವರು ಉಪಸ್ಥಿತರಿದ್ದರು.