ದಾವಣಗೆರೆ-ಸೆಪ್ಟೆಂಬರ್,
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವದ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡಿನಲ್ಲಿ ಶ್ರೀ ಗಣೇಶನ ಚಿತ್ರ ಬರೆಯುವ ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗೆ ಪ್ರಕಟಿಸಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಸ್ಪರ್ಧಿಗಳ ವಯಸ್ಸಿನ ಅನುಗುಣವಾಗಿ ವಿವಿಧ ಭಾಗಗಳಾಗಿ ವಿಂಗಡಿಸಿದ್ದು, ಹಿರಿಯರ ವಿಭಾಗ ಪ್ರಥಮ ಬಹುಮಾನ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಮತಿ ರೇಖಾ ಶೆಣೈ, ದ್ವಿತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಿ.ಕೆ. ಮಾಧವರಾವ್,
ತೃತೀಯ ಬಹುಮಾನ ದಾವಣಗೆರೆಯ ಸಂತೋಷಕುಮಾರ ಕೆ.ಎಸ್., ಮೆಚ್ಚುಗೆಯ ಬಹುಮಾನ ದಾವಣಗೆರೆಯ ತೇಜಸ್ವಿನಿ ಮಹೇಶ ಜಿ. ಪಡೆದಿರುತ್ತಾರೆ.
ಕಿರಿಯ ವಿಭಾಗ ಪ್ರಥಮ ಬಹುಮಾನ ಬೆಂಗಳೂರಿನ ಕುಮಾರಿ ನವ್ಯ ಮನೋಹರ ಪೈ. ದ್ವಿತೀಯ ಬಹುಮಾನ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಕುಮಾರಿ ನಮಿತಾಶ್ರೀ. ಜೆ.ಎನ್. ತೃತಿಯ ಬಹುಮಾನ ದಾವಣಗೆರೆಯ ಕುಮಾರಿ ನಿಧಿಶ್ರೀ ಮೆಚ್ಚುಗೆ ಬಹುಮಾನ ದಾವಣಗೆರೆಯ ಮಧುಶ್ರೀ.ಕೆ. ಪಡೆದಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕುಮಾರನಾರಾಯಣ ಪೈ, ದ್ವಿತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಾರ ವೈಭವ್.ವಿ.ಶೇಟ್, ತೃತಿಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕುಮಾರ ಸಂಪತ್ ಸಂತೋಷ ಶೇಟ್ ಮೆಚ್ಚುಗೆ ಬಹುಮಾನಗಳು. ದಾವಣಗೆರೆಯ ಕುಮಾರಿ ನಮನ ಎಸ್.ಕೆ. ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆಯ ಕುಮಾರ ನಿತಿನ್ ಟಿ. ಪಡೆದಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ. ನಾಡಿನ ವಿವಿಧ ಜಿಲ್ಲೆಗಳಿಂದ ಸುಮಾರು 1786 ಕಾರ್ಡುಗಳು ಬಂದಿದ್ದು ಈಗಾಗಲೇ ತಿಳಿಸಿದ ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭ ಇರುವುದಿಲ್ಲ. ಬಹುಮಾನ ವಿಜೇತರಿಗೆ ಮಾತ್ರ ಅವರು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಅಭಿನಂದನಾ ಪತ್ರವನ್ನು ಕಳಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿದ್ದಾರೆ.