ಮೂಡುಬಿದಿರೆ: ತೀವ್ರ ಹದಗೆಟ್ಟಿದ್ದ ಬೆಳ್ಮಣ್-ಮೂಡುಬಿದಿರೆ ಸಂಪರ್ಕ ರಸ್ತೆ ದುರಸ್ತಿಪಡಿಸಲು ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಮುಂದಾಗಿರುವುದರಿಂದ ಇಲ್ಲಿ ಅಪಘಾತಗಳು ನಡೆಯುತ್ತಿತ್ತು. ಅಲ್ಲದೆ, ಪುತ್ತಿಗೆ ಪಟ್ಲ ರಸ್ತೆಯ ಪಕ್ಕದಲ್ಲಿ ಭಾಗಶಃ ಹೋಂಡಾ ಬಿದ್ದು ಹದಗೆಟ್ಟಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು.
ಈ ಬಗ್ಗೆ ತುಳುನಾಡು ವಾರ್ತೆ ವೆಬ್‌ಸೈಟ್ ಸುದ್ದಿಯನ್ನು ಪ್ರಕಟಿಸಿದ್ದು, ಇದರಿಂದ ಎಚ್ಚೆತ್ತ ರಾಜ್ಯ ಹೆದ್ದಾರಿ ಪ್ರಾಧಿಕಾರ ಇಂದು ದುರಸ್ತಿಗೆ ಮುಂದಾಗಿದ್ದಾರೆ.
ಬೆಳ್ಮಣ್ ಮತ್ತು ಮೂಡುಬಿದಿರೆ ಸಂಪರ್ಕ ರಸ್ತೆಯ ಪುತ್ತಿಗೆ ಪಟ್ಲ ಹತ್ತಿರ ರಸ್ತೆಯ ಪಕ್ಕ ದೊಡ್ಡ ಹೋಂಡಾ ಬಿದಿದ್ದು, ಒಂದು ವಾರದ ಹಿಂದೆ ಕಾರೊಂದು ಇದೆ ಹೊಂಡಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ ಆಗಿತ್ತು. ಇದರ ಬಗ್ಗೆ ನಿನ್ನೆ ತುಳುನಾಡು ವಾರ್ತೆಯಲ್ಲಿ ವರದಿ ಮಾಡಿತ್ತು.
ರಸ್ತೆ ದುರಸ್ತಿ ಮಾಡಿಸುವಂತೆ ನಮ್ಮ ಪ್ರತಿನಿಧಿ ಜಗದೀಶ್ ಕಡಂದಲೆ ಅವರು ರಸ್ತೆಯು ಹದಗೆಟ್ಟ ಪರಿಸ್ಥಿತಿಯನ್ನು ಹಲವು ಬಾರಿ ಪತ್ರಿಕೆಯಲ್ಲಿ ಪ್ರಸಾರ ಮಾಡಿದ್ದರು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನಿನ್ನೆ ತುಳುನಾಡು ವಾರ್ತೆಯಲ್ಲಿ ವರದಿ ವೈರಲ್ ಆದ ಕಾರಣ ಅಧಿಕಾರಿಗಳು ನಿದ್ದೆಯಿಂದ ಎದ್ದಿದ್ದು, ರಸ್ತೆ ದುರಸ್ತಿಪಡಿಸುತ್ತಿದ್ದಾರೆ.
ಸ್ಥಳೀಯರ ಮೆಚ್ಚುಗೆ
ರಸ್ತೆ ದುರಸ್ತಿಪಡಿಸಿರುವುದರಿಂದ ಸ್ಥಳೀಯರು, ಪ್ರಯಾಣಿಕರು, ಪ್ರವಾಸಿಗಳು ಈ ರಸ್ತೆಯಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗಿದೆ. ಅಲ್ಲದೆ, ಈ ರಸ್ತೆ ಅವ್ಯವಸ್ಥೆ ಬಗ್ಗೆ ಸುದ್ದಿ ಪ್ರಕಟಿಸಿ ದುರಸ್ತಿಪಡಿಸುವಂತೆ ಮಾಡಿದ ʻತುಳುನಾಡು ವಾರ್ತೆʼ ವೆಬ್‌ಸೈಟ್ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.