Thursday, November 7, 2024
Homeರಾಜ್ಯನಿವೃತ್ತ ಯೋಧ ಅನೀಶ್ ಮರಳಿ ಮನೆಗೆ

ನಿವೃತ್ತ ಯೋಧ ಅನೀಶ್ ಮರಳಿ ಮನೆಗೆ

ಉಜಿರೆ: ಮೂಲತಃ ಧರ್ಮಸ್ಥಳದ ನಿವಾಸಿಯಾದ ಅನೀಶ್ ಭೂಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸೋಮವಾರ ಹುಟ್ಟೂರಿಗೆ ಬಂದಾಗ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬೆಳ್ತಂಗಡಿಯಿಂದ ಧರ್ಮಸ್ಥಳದ ವರೆಗೆ ಅವರನ್ನು ವಾಹನಜಾಥಾದಲ್ಲಿ  ಕರೆತರಲಾಯಿತು. ಬಳಿಕ ಅನೀಶ್ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಅವರ ಪತ್ನಿ ಸೌಮ್ಯ, ಮಗಳು ಆಂಬಿಯಾ ಮತ್ತು ಮಗ ಅನ್ವಿನ್  ಜೊತೆಗಿದ್ದರು. ಅನೀಶ್ ಮುಂದೆ ಕೃಷಿ ಕಾಯಕದಲ್ಲಿ ತೊಡಗಿ ಕುಟುಂಬದವರೊಂದಿಗೆ ಧರ್ಮಸ್ಥಳದಲ್ಲಿ ವಾಸ್ತವ್ಯ ಇರುವುದಾಗಿ ಪ್ರಜಾವಾಣಿಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular