ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ 1979 ಬಿ ಕಾಂ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ನಾಲ್ಕನೇ ಸಮ್ಮಿಲನ ಪ್ರಕಾಶ್
ಹೋಟೆಲಿನ ‘ಸಂಭ್ರಮ’ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಸ್ಥಳೀಯ ಶ್ರೀ ಭುವನೇಂದ್ರ ಕಾಲೇಜಿನ 1979 ಬಿ ಕಾಂ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ನಾಲ್ಕನೇ ಸಮ್ಮಿಲನ ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಪ್ರೊ ಡೇನಿಯಲ್ , ಪ್ರೊ ಪದ್ಮನಾಭ ಗೌಡ ಹಾಗು ಪ್ರೊ ಬಿ ಆರ್ ಸುಬ್ಬಣ್ಣ ಉಪಸ್ಥಿತ ರಿದ್ದರು. ದೀಪ ಪ್ರಜ್ವಲನ ಕಾರ್ಯಕ್ರಮದ ನಂತರ ಕಾಲೇಜಿಲಿನ ಹಳೆ ವಿದ್ಯಾರ್ಥಿ ಹಾಗು ಸಮಿತಿ ಸದಸ್ಯ ಚಿತ್ತರಂಜನ್ ಮರಾಟಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯ ನಿರ್ವಾಹಕ ಹಾಗು ಸಮಿತಿ ಸದಸ್ಯ ಯೋಗೀಶ್ ಕಾಮತ್ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು.
ಹಳೆ ವಿದ್ಯಾರ್ಥಿ ಸತೀಶ್ ಪೈ ಹಾಗು ಆನಂದ್ ಬೈಲೂರ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಶ್ರೀ ಪ್ರೊ ಡೇನಿಯಲ್ ಹಾಗು ಶ್ರೀ ಪ್ರೊ ಪದ್ಮನಾಭ ಗೌಡ ಅವರು ಹಳೆ ವಿದ್ಯಾರ್ಥಿಗಳ ಒಡನಾಟದಲ್ಲಿ ನಡೆದ ಘಟನೆಗಳ ಹಾಗು ಅವರ ಅಧ್ಯಾಪಕ ವೃತ್ತಿಯ ದಿನಗಳ ಬಗ್ಗೆ ಸ್ಪೂರ್ತಿದಾಯಕವಾದ ಭಾಷಣವನ್ನು ಮಾಡಿದರು. ಕಳೆದ ಮೂರು ಸಮ್ಮಿಲನಗಳಲ್ಲಿ ಭಾಗಿಯಾದ ಶ್ರೀ ಪ್ರೊ ಸುಬ್ಬಣ್ಣ ಅವರು 1979 ಬಿ ಕಾಂ ಬ್ಯಾಚಿನ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಶುಭಕೋರಿದರು. ಸದಾನಂದ ಉಪಾಧ್ಯಾಯ ಇಂದಿನ ಜೀವನದ ಹಾಗು ಅವರ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಆನಂದ ಬೈಲೂರ್ ಅವರು ವಂದನಾರ್ಪಣೆ ಮಾಡಿದರು. ಸುಮಂಗಲ ಕಾಮತ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

