ಸ್ವರಾಜ್ಯ 75, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ ಕೋಟ ಹಾಗೂ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ ಹಾಗೂ ಹಸ್ತ ಚಿತ್ತ ಪೌಂಡೇಷನ್ ರಿ ವಕ್ವಾಡಿ ಇವರ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸಮ್ಮಿಲನ ಹಾಗೂ ವಿದ್ಯಾರ್ಥಿ ವೇತನ ಸಮಾರಂಭ ಸನ್ಮತಿ ದೀಪದ ಅನುರಣನೆ ಕಾಯ೯ಕ್ರಮ ಕೋಟ ಕಾರಂತರ ಥೀಮ್ ಪಾಕ೯ನಲ್ಲಿ ಜರುಗಿತು.
ಕಾಯ೯ಕ್ರಮದ ಅಧ್ಯಕ್ಷತೆ ಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಕೆ.ಸತೀಶ ಕುಂದರ್ ಬಾರಿಕೆರೆ ವಹಿಸಿದ್ದರು. ದೀಪ ಬೆಳಗಿಸಿ ಉದ್ಘಾಟಿಸಿದ ಹಾಜಿ ಅಬ್ದುಲ್ಲಾ ಸಾಹೇಬ್ ಟ್ರಸ್ಟ್ ನ ಉಪಾಧ್ಯಕ್ಷರು ಸಿರಾಜ್ ಅಹಮ್ಮದ್ ಸಾಹೇಬ್ ಅಶಕ್ತರಿಗೆ ಸಹಕಾರಿಯಾಗುವುದು ನಮ್ಮ ಕತ೯ವ್ಯ ಹಾಜಿ ಅಬ್ದುಲ್ಲಾ ಸಾಹೇಬ್ ಸಹಾ ಸಹಕಾರ ದ ಮನೋಭಾವದ ವ್ಯಕ್ತಿಯಾಗಿದ್ದರು .ಅವರಂತೆ ನಾವು ಕೂಡಾ ಸಮಾಜಕ್ಕೆ ಉತ್ತಮ ಸಂದೇಶ ನೀಡುಂತಿರಬೇಕು ಎಂದು ಶುಭಾಶಯದ ನುಡಿಯನ್ನಾಡಿದರು.
ಕಾಯ೯ಕ್ರಮದ ಮುಖ್ಯ ಅತಿಥಿಯವರಾಗಿ ಬಂಟಕಲ್ಲು ರಾಮಕೃಷ್ಣ ಶಮಾ೯, ಅಕ್ಷತಾ ಗಿರೀಶ್ ಐತಾಳ್, ಉಪಸ್ಥಿತರಿದ್ದರು. ವಿಶೇಷವಾದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಗರ ಕೊಡುಗೆಯ ವಿಚಾರವನ್ನು ಕುಮಾರಿ ಕವಿತಾ ಆಚಾಯ೯ ಮುದೂರು ಹಂಚಿಕೊಂಡರು. ಕಾಯ೯ಕ್ರಮದಲ್ಲಿ ಕಾರಂತ ಥೀಮ್ ಪಾಕ೯ನ ಟ್ರಸ್ಟಿಯ ಕಾಯ೯ದಶಿ೯ ಯವರಾದ ನರೇಂದ್ರ ಕುಮಾರ್ ಕೋಟ ಮಾಗ೯ದಶ೯ನ ನೀಡಿದರು. ಕಾಯ೯ಕ್ರಮದ ನಿರೂಪಣೆ ಹಾಗೂ ಧನ್ಯವಾದ ವನ್ನು ಅಕ್ಷತಾ ಗಿರೀಶ್ ಐತಾಳ್ ನಡೆಸಿದರು ಪ್ರಾಸ್ತಾವಿಕ ನುಡಿಯನ್ನು ಕಾಯ೯ಕ್ರಮದ ಸಂಚಾಲಕರು ಪ್ರದೀಪ ಕುಮಾರ್ ಬಸ್ರೂರು ಮಾತನಾಡಿದರು. ಪ್ರಾಥ೯ನೆಯನ್ನು ಕುಮಾರಿ ಅಮಿತಾ ಹಾಡಿದಳು.