Wednesday, September 11, 2024
Homeಸಿನಿಮಾಬಾಲಿವುಡ್‌ ಸಿನೆಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್‌ ಶೆಟ್ಟಿ

ಬಾಲಿವುಡ್‌ ಸಿನೆಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್‌ ಶೆಟ್ಟಿ

ಬೆಂಗಳೂರು: ಬಾಲಿವುಡ್‌ ಸಿನೆಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಆ ಮೂಲಕ ಭಾರತ ವಿರೋಧಿ ಕತೆಗಳನ್ನು ಹೆಣೆಯೋ ಹಿಂದಿ ಸಿನೆಮಾಗಳ ವಿರುದ್ಧ ಚಾಟಿ ಬೀಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಿನೆಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್‌ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದೇ ಸಿನೆಮಾ ಮಾಡೋ ಆರ್ಟ್ಸ್‌ ಎಂದುಕೊಂಡು ಹೊರದೇಶಗಳಿಗೆ ಹೋಗಿ ಅವಾರ್ಡ್‌ ಗೆದ್ದು ಬಂದಿದ್ದನ್ನು ನೋಡಿದ್ದೇನೆ. ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ನಮ್ಮಲ್ಲಿರುವುದನ್ನು ಪಾಸಿಟಿವ್‌ ನೋಟ್‌ನಲ್ಲಿ ತೋರಿಸಬಹುದಲ್ಲ ಎಂದು ರಿಷಬ್‌ ಶೆಟ್ಟಿ ಮಾತನಾಡಿದ್ದಾರೆ.
ರಿಷಬ್‌ ಶೆಟ್ಟಿ ಹೇಳಿಕೆಗೆ ಹಲವರು ಬೆಂಬಲ ಸೂಚಿಸಿದ್ದಾರೆ. ರಿಷಬ್‌ ಸರಿಯಾಗಿ ಮಾತನಾಡಿದ್ದಾರೆ. ಎಂದಿಗೂ ನಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸುವ ಸಿನೆಮಾಗಳು ಬರಬೇಕು ಎಂದು ಅಭಿಮಾನಿಗಳು ನಟನ ಪರ ಮಾತನಾಡಿದ್ದಾರೆ. ಸದ್ಯ ರಿಷಬ್‌ ಶೆಟ್ಟಿ ಕಾಂತಾರಾ ಪ್ರೀಕ್ವೆಲ್‌ ನಿರ್ಮಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular