Tuesday, March 18, 2025
Homeಆರೋಗ್ಯಹೆಚ್ಚುತ್ತಿರುವ ತಾಪಮಾನ: ಜನರಲ್ಲಿ ಆತಂಕ ಮೂಡಿಸಿದ ಸನ್‌ಸ್ಟ್ರೋಕ್​, ಕಾಲರ, ಆರೋಗ್ಯ ಇಲಾಖೆ ಅಲರ್ಟ್‌

ಹೆಚ್ಚುತ್ತಿರುವ ತಾಪಮಾನ: ಜನರಲ್ಲಿ ಆತಂಕ ಮೂಡಿಸಿದ ಸನ್‌ಸ್ಟ್ರೋಕ್​, ಕಾಲರ, ಆರೋಗ್ಯ ಇಲಾಖೆ ಅಲರ್ಟ್‌

ಬೆಂಗಳೂರು : ಈ ಬಾರಿಯ ಬೇಸಿಗೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಬೆಳಗಿನ ಹೊತ್ತಲ್ಲೇ ಮಟಮಟ ಮಧ್ಯಾಹ್ನದ ಬಿಸಿಲಿನ ಅನುಭವ ಆಗುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ ಬರೋಬ್ಬರಿ 37 ಡಿಗ್ರಿ ಸೆಲ್ಸಿಯಸ್​ ತಾಮಮಾನ ದಾಖಲಾಗಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 37.6 ಡಿಗ್ರಿ ದಾಖಲಾಗಿತ್ತು. ಕಲಬುರಗಿಯಲ್ಲಿ ಬರೋಬ್ಬರಿ 42 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಬೆಂಗಳೂರಿನಲ್ಲಿ ( ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಪಿಯಸ್‌ ಇದೆ. ಕಳೆದ 15 ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚಿನ ತಾಪಮಾನವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಣಬಿಸಿಲಿನ ತಾಪಕ್ಕೆ ಜನ ತತ್ತರಿಸುತ್ತಿದ್ದಾರೆ. ಬಿಸಿಲಿನ ತಾಪದಿಂದ ಏಕಾಏಕಿ ಶಂಕಿತ ಕಾಲರ, ಬಿಸಿಗಾಳಿ ಹೆಚ್ಚಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ, ಬಿಸಿಲಿನಿಂದಾಗಿ ಕಲಬುರಗಿ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದನ್ನು ತಳ್ಳಿಹಾಕಿದ್ದಾರೆ. ಅಲ್ಲದೆ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಲ್ಲಿ ಕಾಲರ ರೋಗ ಕಂಡು ಬಂದಿಲ್ಲ. ಇನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 42 ವಿದ್ಯಾರ್ಥಿನಿಯರಲ್ಲಿ 32 ಜನರಲ್ಲಿ ಕಾಲರ ರೋಗ ಕಾಣಿಸಿಲ್ಲ ಎಂದು ತಿಳಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಇಬ್ಬರು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಮೂವರಿಗೆ ಕಾಲರ ಕಾಣಿಸಿಕೊಂಡ ಮಾಹಿತಿ ಲಭ್ಯವಾಗಿದೆ. ರಾಮನಗರದಲ್ಲಿ 1 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳು ವರದಿಯಾಗಿವೆ.

ಬಿಸಿಲು ಹೆಚ್ಚಾಗ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಶುರು ಮಾಡಿವೆ. ಡಿಹೈಡ್ರೇಷನ್, ಉಸಿರಾಟದ ಸಮಸ್ಯೆ, ಅತಿಸಾರ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಬಾಧಿಸುತ್ತಿವೆ.‌ ಇದರ ನಡುವೆ ಡೆಂಘೀ ಹಾಗೂ ಚಿಕನ್ ಗುನ್ಯಾ ಹೆಚ್ಚಾಗುತ್ತಿವೆ. ಕಳೆದ ಮೂರು ತಿಂಗಳಿನಲ್ಲಿ 1663 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 535ಕೇಸ್‌ ದಾಖಲಾಗಿವೆ.

ಒಟ್ಟಿನಲ್ಲಿ ಬಿರುಬಿಸಲ ಹೊಡೆತಕ್ಕೆ ಬೆಂಗಳೂರಿಗರು ಹೈರಾಣಾಗಿದ್ದಾರೆ. ಇದರ ಜೊತೆಗೆ ಕಾಲರ, ಡೆಂಘೀ ಅಂತಾ ರೋಗಗಳು ಹೆಚ್ಚಾಗಿವೆ.

RELATED ARTICLES
- Advertisment -
Google search engine

Most Popular