Saturday, December 14, 2024
Homeರಾಷ್ಟ್ರೀಯರಸ್ತೆ ಗುಂಡಿಯಿಂದಾಗಿ ಹೆಂಡತಿ ಬಿದ್ದಿದ್ದಕ್ಕೆ ಗಂಡನ ಮೇಲೆಯೇ ಕೇಸು ಹಾಕಿದ ಪೊಲೀಸರು!

ರಸ್ತೆ ಗುಂಡಿಯಿಂದಾಗಿ ಹೆಂಡತಿ ಬಿದ್ದಿದ್ದಕ್ಕೆ ಗಂಡನ ಮೇಲೆಯೇ ಕೇಸು ಹಾಕಿದ ಪೊಲೀಸರು!

ಇಂದೋರ್: ರಸ್ತೆಗಳಲ್ಲಿ ಗುಂಡಿಗಳಿರುವುದು ಸಾಮಾನ್ಯ, ಸಾರ್ವಜನಿಕರು ಅದರ ಸಂಕಷ್ಟ ಅನುಭವಿಸುವುದು ಅನಿವಾರ್ಯ ಎಂಬಂತಾಗಿದೆ ಜೀವನ. ದೇಶಾದ್ಯಂತ ಇಂತಹುದೇ ಪರಿಸ್ಥಿತಿ ಇದೆ. ಮನೆಯಿಂದ ಹೊರಟವರು ಗುಂಡಿಯ ರಸ್ತೆಗಿಳಿದರೆ ವಾಪಸ್ ಮನೆಗೆ ಹೋಗೋದು ಅನುಮಾನ ಎನ್ನುವಂತಾಗಿದೆ. ಮಧ್ಯಪ್ರದೇಶದಲ್ಲಿ ಇಂತಹದೇ ದಾರುಣ ಘಟನೆಯೊಂದು ನಡೆದಿದೆ. ರವಿ ಗೌರ್ ಎಂಬ ವ್ಯಕ್ತಿ ತನ್ನ ಹೆಂಡತಿ ಶಾನು ಗೌರ್‌ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ. ದಾರಿ ಮಧ್ಯೆ ರಸ್ತೆ ಗುಂಡಿಗೆ ಬಿದ್ದ ಈತನ ಪತ್ನಿಗೆ ಬಲವಾದ ಪೆಟ್ಟಾಗಿದೆ. ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಶಾನು ಗೌರ್ ಗಾಯಗೊಂಡಿದ್ದು, ಆತನ ಪತ್ನಿ ಕೋಮಾಕ್ಕೆ ಹೋಗಿದ್ದಾರೆ.
ರವಿ ಗೌರ್ ಅವರ ಪತ್ನಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದರೆ, ಇತ್ತ ಇಂದೋರ್ ಪೊಲೀಸರ ನಡೆ ಅಚ್ಚರಿಗೆ ಕಾರಣವಾಗಿದೆ. ಈ ಗುಂಡಿಯ ಪ್ರಕರಣ ದಾಖಲಿಸಿರೋ ಇಂದೋರ್ ಪೊಲೀಸರು ಹೆಂಡತಿ ಗಂಭೀರ ಗಾಯಗೊಂಡಿದ್ದಕ್ಕೆ ರವಿ ಗೌರ್ ಮೇಲೆಯೇ ಕೇಸ್ ದಾಖಲಿಸಿದ್ದಾರೆ. ವೇಗವಾಗಿ ವಾಹನ ಚಲಾಯಿಸಿದ ತಪ್ಪಿಗೆ ಗಂಡನ ವಿರುದ್ಧ FIR ದಾಖಲಿಸಿದ್ದಾರೆ.
ಕಳೆದ ಸೆಪ್ಟೆಂಬರ್ 14ರಂದು ಇಂದೋರ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ದೊಡ್ಡ ರಸ್ತೆ ಗುಂಡಿಯ ಅವಾಂತರದಿಂದ 23 ವರ್ಷದ ಮಹಿಳೆ ಕೋಮಾದಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಗಂಡನ ಮೇಲೆ ಪೊಲೀಸರು ಕೇಸ್ ಹಾಕಿ ನಗೆಪಾಟಲಿಗೀಡಾಗಿದ್ದಾರೆ.
ಇಂದೋರ್ ಪೊಲೀಸರ ಈ ಕೇಸ್ ಸಾಕಷ್ಟು ಚರ್ಚೆಗೀಡಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ಇದೆಂಥಾ ನ್ಯಾಯ. ತಪ್ಪೇ ಮಾಡದ ಗಂಡನ ಮೇಲೆ ಕೇಸ್ ಹಾಕಿದ ಪೊಲೀಸರ ಮೇಲೆ ಕರ್ತವ್ಯ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ. ನಗರ ಪಾಲಿಕೆಯ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಅಪಘಾತವಾದ ರಸ್ತೆ ಕಾಮಗಾರಿ ಕೈಗೊಂಡ ಏಜೆನ್ಸಿಯ ಮಾಹಿತಿ ನೀಡುವಂತೆ ಕೋರಿದ್ದಾರೆ. ರಸ್ತೆ ದುರಸ್ಥಿಯಲ್ಲಿ ನಿರ್ಲಕ್ಷ್ಯ ತೋರಿರುವ ಪಾಲಿಕೆ ಹಾಗೂ ಏಜೆನ್ಸಿಯ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ.

RELATED ARTICLES
- Advertisment -
Google search engine

Most Popular