ಬಜ್ಪೆ: ಇಲ್ಲಿಗೆ ಸಮೀಪದ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಗುಂಡಿ ಬಿದ್ದ ಕಾರಣ ಘನ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ವರದಿಯಾಗಿದೆ. ಬಜ್ಪೆ-ಪೊರ್ಕೋಡಿ ರಸ್ತೆಯಲ್ಲಿ ಧಾರಾಕಾರ ಮಳೆಗೆ ಈ ಹಾನಿ ಸಂಭವಿಸಿದೆ.
ಮಳೆ ನೀರು ಹರಿವಿಗೆ ಕಟ್ಟಲಾಗಿರುವ ಮೋರಿಯಲ್ಲಿ ತಡೆಯುಂಟಾಗಿ ಮೋರಿಯಲ್ಲಿ ಮಣ್ಣು ಸವೆತ ಕಂಡು ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಈ ಅಪಾಯದ ಬಗ್ಗೆ ಸ್ಥಳೀಯರು ಮೊದಲೇ ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರೂ, ಇಲಾಖೆಯ ನಿರ್ಲಕ್ಷ್ಯದಿಂದ ಈ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಗುಂಡಿ ಇದ್ದುದರಿಂದ ಘನ ವಾಹನಗಳು ಪರ್ಯಾಯ ರಸ್ತೆಯನ್ನು ಬಳಸಿದವು. ಬಜ್ಪೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಆಗಮಿಸಿ ಗುಂಡಿಗೆ ಮಣ್ಣು ಹಾಕಿ ದುರಸ್ತಿಪಡಿಸಿದರು.