ನವದೆಹಲಿ: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ರೋಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಕ್ರಿಯೆಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ.
ದಾನಿಗಳ ನಿರೀಕ್ಷೆಯಲ್ಲಿದ್ದ ಉತ್ತರ ಪ್ರದೇಶದ ಫರೂಕಾಬಾದ್ ವ್ಯಕ್ತಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಿದ್ದಾರೆ. ಡಯಾಲಿಸಿಸ್ ನಲ್ಲಿದ್ದ ಈ ವ್ಯಕ್ತಿಗೆ ಅಂಗಾಂಗ ಕಸಿ ಶಸ್ತ್ರಕ್ರಿಯೆಯನ್ನು ಡಾ. ಅನೂಪ್ ಕುಮಾರ್ ನೇತೃತ್ವದ ವೈದ್ಯರ ತಂಡ ನಿರ್ವಹಿಸಿದೆ. ಈ ತಂಡದಲ್ಲಿ ಮೂತ್ರಕೋಶ, ರೊಬೊಟಿಕ್ಸ್ ಹಾಗೂ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ತಜ್ಞರು ಉಪಸ್ಥಿತರಿದ್ದರು. ಸಫ್ದರ್ ಜಂಗ್ ಆಸ್ಪತ್ರೆ ಮತ್ತು ವಿಎಂಎಂಸಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದೆ.
ದೇಶದಲ್ಲಿ ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಬೊ ಬಳಸಿ ನಡೆದ ಎರಡನೇ ಶಸ್ತ್ರಚಿಕಿತ್ಸೆ ಎಂದು ವೈದ್ಯರು ಹೇಳಿದ್ದಾರೆ.