ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳುವ ವರದಿಗಳನ್ನು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ ಇದೇ ಮೊದಲ ಬಾರಿ ರೋಬೊಟ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯೊಂದು ಲಭ್ಯವಾಗಿದೆ.
ಆಶ್ಚರ್ಯವಾದರೂ ನಿಜ, ಹೌದು ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ. ಮಧ್ಯ ದಕ್ಷಿಣ ಕೊರಿಯಾದ ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೊಡ್ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ. ಇದು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿ ರೋಬೊಟ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ರೋಬೊಟ್‌ನ ಭಾಗಗಳನ್ನು ಸಂಗ್ರಹಿಸಲಾಗಿದೆ. ಅದನ್ನು ವಿನ್ಯಾಸಗೊಳಿಸಿದ ಕಂಪನಿಯು ಅದನ್ನು ವಿಶ್ಲೇಷಿಸುತ್ತಿದೆ. ಮುನ್ಸಿಪಲ್ ಕಾರ್ಪೊರೇಶನ್‌ನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ರೋಬೊಟ್ ಕಳೆದ ಒಂದು ವರ್ಷದಿಂದ ಬ್ಯುಸಿಯಾಗಿತ್ತು. ಕಳೆದ ವಾರ ಮೆಟ್ಟಿಲುಗಳ ಕೆಳಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ರೋಬೊಟ್ ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ರೋಬೊಟ್ ಓಡಾಡುತ್ತಿತ್ತು ಮತ್ತು ಕೆಲಸ ಮಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಅದು ಯಾಕೆ ಆತ್ಮಹತ್ಯೆ ಮಾಡಿಕೊಂಡಿತು ಅನ್ನೋದರ ಬಗ್ಗೆ ತನಿಖೆ ಆರಂಭವಾಗಿದೆ. ಗುಮಿ ನಗರದ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಇದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ನಿರಂತರ ಕೆಲಸ ಮಾಡುತ್ತಿತ್ತು. ತನ್ನದೇ ಆದ ಸೇವಾ ಕಾರ್ಡ್ ಕೂಡ ಹೊಂದಿತ್ತು. ಅದು ಪಾಲಿಕೆಯ ಅಧಿಕೃತ ಕೆಲಸಗಾರನಾಗಿತ್ತು.
ರೋಬೊಟ್ ಆತ್ಮಹತ್ಯೆ | ಜಗತ್ತಿನ ಪ್ರಪ್ರಥಮ ಕೇಸ್!
RELATED ARTICLES