ರೋಟರ್ಯಾಕ್ಟ್ ಯುವಜನತೆಯ ಸಂಸ್ಥೆಯಾಗಿದ್ದು, ವ್ಯಕ್ತಿತ್ವ ವಿಕಸನ, ವೃತ್ತಿ ಮಾರ್ಗದರ್ಶನಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಸಂಸ್ಥೆಗೆ ಹೆಚ್ಚಿನ ಸದಸ್ಯರನ್ನು ಸೇರ್ಪಡಿಸಿಕೊಳ್ಳುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕಾರ್ಯವಾಗಬೇಕು ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಹಾಗೂ ಜಿಲ್ಲಾ ರೋಟರಿ ಸಲಹೆಗಾರ ಡಾ.ಬಿ.ದೇವದಾಸ್ ರೈ ಸಲಹೆ ನೀಡಿದರು.
ಅವರು ಭಾನುವಾರ ನಗರದ ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿವಿಯ ಸಾನಿಧ್ಯ ಸಭಾಂಗಣದಲ್ಲಿ ರೋಟರ್ಯಾಕ್ಟ್ ಕ್ಲಬ್ ಸಂತ ಅಲೋಶಿಯಸ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಹಯೋಗದಲ್ಲಿ ರೋಟರ್ಯಾಕ್ಟ್ ಜಿಲ್ಲಾ ಕರಾವಳಿ ವಲಯದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ನೂತನ ಪದಾಧಿಕಾರಿಗಳ ಪದಗ್ರಹಣ ವಿಧಿವಿಧಾನ ನೆರವೇರಿಸಿದರು.
ಗೌರವ ಅತಿಥಿಯಾಗಿ ರೋಟರ್ಯಾಕ್ಟ್ ಜಿಲ್ಲಾ ಸಮಿತಿಯ ಯಶೋಮತಿ ರವೀಂದ್ರನಾಥ್ ಈ ಕಾರ್ಯಾಗಾರದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿ ಇದರ ಸದುಪಯೋಗವನ್ನು ಪಡೆದುಕೊಂಡು ಕಾರ್ಯಾಗಾರದ ಯಶಸ್ವಿಗೆ ಶುಭಕೋರಿದರು.
ರೋಟರ್ಯಾಕ್ಟ್ ವಲಯ ಪ್ರತಿನಿಧಿ ಅವಿನಾಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೋಟರ್ಯಾಕ್ಟ್ ಸಂತ ಅಲೋಶಿಯಸ್ ಸಂಸ್ಥೆಯ ಅಧ್ಯಕ್ಷ ಆ್ಯರೆನ್ ಕ್ರಾಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಮಾರ್ಕ್ ಮಸ್ಕರೇನಸ್ ವಂದಿಸಿದರು. ಫಾಹಿ ಕಾರ್ಮೆಲ್ ರಾಡ್ರಿಗಸ್ ನಿರೂಪಿಸಿದರು. ಈ ಸಂದರ್ಭ 60ಕ್ಕೂ ಅಧಿಕ ರೋಟರ್ಯಾಕ್ಟ್ ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ರೋಟರ್ಯಾಕ್ಟ್ ಯುವಜನತೆಗೆ ಪೂರಕ ಸಂಸ್ಥೆ: ಡಾ.ದೇವದಾಸ್ ರೈ
RELATED ARTICLES