Sunday, July 14, 2024
Homeಮಂಗಳೂರುರೋಟರಿ 21ನೇ ವಾರ್ಷಿಕ ವಂದನಾ ಪ್ರಶಸ್ತಿ ಪ್ರಧಾನ

ರೋಟರಿ 21ನೇ ವಾರ್ಷಿಕ ವಂದನಾ ಪ್ರಶಸ್ತಿ ಪ್ರಧಾನ

ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ,ಅನುಕರಣೀಯ -ಡಾ. ಎ. ಸದಾನಂದ ಶೆಟ್ಟಿ

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋರ‍್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ ರಾಜ್ಯಮಟ್ಟದ 21ನೇ ವಾರ್ಷಿಕ 2024ನೇ ಸಾಲಿನ ಪ್ರತಿಷ್ಠಿತ “ವಂದನಾ ಪ್ರಶಸ್ತಿ”ಯನ್ನು ಖ್ಯಾತ ಮಾಜಿ ಒಲಿಂಫಿಕ್ ಕ್ರೀಡಾಪಟು ಶೈನಿ ವಿಲ್ಸನ್ (ಅಬ್ರಾಹಂ) ರವರಿಗೆ ನಗರದ ಹೊಟೇಲ್ ಮೋತಿಮಹಲ್ ಸಭಾಂಗಣದಲ್ಲಿ 29-3-2024 ರಂದು ಜರಗಿದ ಸಮಾರಂಭದಲ್ಲಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. ಈ ಪ್ರಶಸ್ತಿಯನ್ನು ಶೈನಿ ವಿಲ್ಸನ್ (ಅಬ್ರಾಹಂ) ರಾಷ್ಟ್ರಿಯ ಮತ್ತು
ಅಂತರಾಷ್ಟ್ರಿಯ ಕ್ರೀಡಾ ಕೂಟದಲ್ಲಿ ಸಲ್ಲಿಸಿದ ಸುಧೀರ್ಘ ಅನುಪಮ ಸೇವೆ ಮತ್ತು ಸಾಧಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಧಾನ ಮಾಡಲಾಯಿತು. ಶ್ರೀದೇವಿ ಶಿಕ್ಷಣ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎ. ಸದಾನಂದ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರ ಅಪತ್ರಿಮ ಸಾಧನೆಯನ್ನು ಅಭಿನಂದಿಸಿ, ರೋಟರಿ ಸಂಸ್ಥೆಯ ನಿಸ್ವಾರ್ಥ ಸಮುದಾಯ ಸೇವೆ ಮತ್ತು ಸತ್ಕಾರ್ಯ ಶ್ಲಾಘನೀಯ, ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಅಭಿನಂದನೀಯ, ಅನುಕರಣೀಯ ಮತ್ತು ಇತರ ಸಂಸ್ಥೆಗಳಿಗೆ ಮಾದರಿ ಎಂದು ನುಡಿದರು. ಸನ್ಮಾನಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ ಶೈನಿ ವಿಲ್ಸನ್ (ಅಬ್ರಾಹಂ) ರವರು ತಮ್ಮ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿಗೆ ಪ್ರೇಕ್ಷಕರ ಬೆಂಬಲ ಮತ್ತು
ಕ್ರೀಡಾಭಿಮಾನಿಗಳ ಪ್ರೋತ್ಸಾಹವೇ ಕಾರಣವೆಂದು ನುಡಿದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. 1992ನೇ ಬಾರ್ಸಿಲೋನಾ ಒಲಿಂಫಿಕ್ ಕ್ರೀಡಾಕೂಟದಲ್ಲಿ ಭಾರತ ದೇಶದ ತಂಡದ ನಾಯಕಿಯಾಗಿ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು ಪಥ ಸಂಚಲನ ಮಾಡಿದ್ದು ನನ್ನ ಕ್ರೀಡಾ ಜೀವಮಾನ ಸಾಧನೆಯ ಅಮೂಲ್ಯ ಕ್ಷಣ ಎಂದು ಮಾಹಿತಿ ನೀಡಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ. ದೇವದಾಸ್ ರೈರವರು ವಂದನಾ ಪ್ರಶಸ್ತಿಯು ತಮ್ಮ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿದ್ದು, ಈ ವಾರ್ಷಿಕ ಪ್ರಶಸ್ತಿಯನ್ನು ಸಾಧಕರನ್ನು ಗುರುತಿಸಿ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿ ಪ್ರಸುತ್ತ ಸಾಲಿನ ಪ್ರಶಸ್ತಿ ವಿಜೇತರಾದ ಶೈನಿ ವಿಲ್ಸನ್ (ಅಬ್ರಾಹಂ) ರವರ ಕ್ರೀಡಾ ಸಾಧನೆಯನ್ನು ಅಭಿನಂದಿಸಿದರು. ರೋರ‍್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ರೋ ಅವಿನಾಶ್ ಕುಲಾಲ್ ರವರು ಪ್ರಶಸ್ತಿ ವಿಜೇತರ ಪರಿಚಯ ಮತ್ತು ಅವರ ವಿವಿಧ ಕ್ರೀಡಾ ಸಾಧನೆಗಳ ವಿವರ ನೀಡಿದರು. ರೋರ‍್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿಯವರಾದ ರಾಹುಲ್ ಆಚಾರ್ಯರವರು ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ “ಸೆಂಟೊರ್”ಬಿಡುಗಡೆಗೊಳಿಸಿದರು. ರೋಟರಿ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ರೋ| ರಾಜೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರೋ. ರವಿ ಜಲನ್ ಮಾಸಿಕ ವರದಿ ಮಂಡಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ರೋ| ಸಾಯಿಬಾಬಾ ರಾವ್, ಚುನಾಯಿತ ಅಧ್ಯಕ್ಷ ರೋ| ಬ್ರಿಯಾನ್ ಪಿಂಟೋ, ವಿಲ್ಸನ್ ಚೆರಿಯಾನ್ ಮತ್ತು ಪ್ರಮೀಳ ಶೆಟ್ಟಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋರ‍್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ರೋ|
ವರುಣ್ ರೈ ವಂದಿಸಿದರು.

RELATED ARTICLES
- Advertisment -
Google search engine

Most Popular