ಮಂಗಳೂರು. ಮೇ. ೨೩ : ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ ೩ನೇ ವಾರ್ಷಿಕ ಪ್ರತಿಷ್ಠಿತ ರೋಟರಿ ಆನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ-೨೦೨೪ ಯನ್ನು ಯುವ ಸಾಧಕ ಶ್ರೀನಿಧಿ ಮತ್ತು ಯವ ಸಾಧಕಿ ಕು| ರಿಷಿಕಾ ಕುಂದೇಶ್ವರ್‌ರವರ ಶ್ರೇಷ್ಠ ಪ್ರತಿಭೆ ಮತ್ತು ಗಮನಾರ್ಹ ಸಾಧನೆಯನ್ನು ಪರಿಗಣಿಸಿ 22.05.2024 ರಂದು ನಗರದ ಹೋಟೆಲ್ ಉತ್ಸವ್ ವೈಭವ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅಬಿನಂದಿಸಲಾಯಿತು.
ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ| ಪ್ರಶಾಂತ್ ರೈ ರವರು ಸ್ವಾಗತಿಸಿ, ನಗರದ ದ.ಕ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರೋ| ರಾಜೇಂದ್ರ ಕಲ್ಬಾವಿಯವರು ಅವರ ಪೋಷಕಾರಾದ ದಿ! ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ| ಸುಮಿತ್ರ ರಾವ್ ಸ್ಮರರ್ಣಾರ್ಥ ಜಿಲ್ಲೆಯ ಯುವ ಪ್ರತಿಭಾ ಮತ್ತು ಯುವ ಸಾಧಕರಾಗಿ ಪ್ರಶಸ್ತಿಯನ್ನು ಪ್ರಾಯೋಜಿಸಲಾಗಿದ್ದು ಸಂಸ್ಥೆಯ ಯುವಜನ ಸೇವಾ ಯೋಜನೆಯ ಅಂಗವಾಗಿ ಯುವ ಸಾಧಕ ಶ್ರೀನಿಧಿ (ಮೊಬೈಲ್ ಶೈಕ್ಷಣಿಕ ಆ್ಯಪ್ ಶೋಧನೆ) ಮತ್ತು ಯವ ಸಾಧಕಿ ಉದಯೋನ್ಮುಖಿ ಮತ್ತು ಪ್ರತಿಭಾವಂತೆ ದೃಶ್ಯ ಮಾಧ್ಯಮ ನಾಟಕ ಕಲಾವಿದೆ ಕು| ರಿಷಿಕಾ ಕುಂದೇಶ್ವರಿಗೆ ಅವರ ಸಾಧನೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿ ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ರೂ. 10000- ಒಳಗೊಂಡಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಶಸ್ತಿಯ ಪ್ರಾಯೋಜಕಾರದ ರೋಟರಿ ಜಿಲ್ಲಾ ವೃತೀಪರ ಸೇವಾ ಯೋಜನೆಯ ಅಧ್ಯಕ್ಷರಾದ ರೋ| ರಾಜೇಂದ್ರ ಕಲ್ಬಾವಿಯವರು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರ ಪ್ರತಿಭೆ ಮತ್ತು ಸಾಧನೆಯನ್ನು ಪ್ರಶಂಶಿಸಿ ಉಜ್ವಲ ಭವಿಷ್ಯ ಹಾರೈಸಿದರು.
ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷರಾದ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ರೋ| ಡಾ| ರಂಜನ್ ರಾವ್‌ರವರು ಪ್ರಶಸ್ತಿ ವಿಜೇತರ ಪರಿಚಯ, ಅಪ್ರತಿಮ ಪ್ರತಿಭೆ ಮತ್ತು ಅವರು ಸಾಧಿಸಿದ ಗಮನಾರ್ಹ ಸಾಧನೆಯ ಗುಣಗಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪ್ರಶಸ್ತಿ ವಿಜೇತರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕಾರದ ರೊ| ಸುಮಿತ್ ರಾವ್, ಮತ್ತು ಯುವಜನ ಸೇವಾ ಸಂಸ್ಥೆಯ ನಿರ್ದೇಶಿಕಿ ರೋ| ಸರಿತಾ ಡಿ’ ಸೋಜ, ಚುನಾಯಿತ ಕಾರ್ಯದರ್ಶಿ ರೋ| ಸುದೇಶ್ ಉಪಸ್ಥಿರತಿದ್ದರು. ಕಾರ್ಯದರ್ಶಿ ರೋ| ಗಣೇಶ್ ರವರು ವಂದಿಸಿದರು.