ಮಂಗಳೂರು : “ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧಗುರು ಶಿಷ್ಯರ ಅನುರಾಗದ ಅನುಬಂಧ, ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಸ್ತುಬದ್ಧ ಶಿಕ್ಷಣವನ್ನು ಧಾರೆಯೆರೆದು ಕಠಿನ ಸವಾಲುಗಳನ್ನು ಎದುರಿಸಲು ಮತ್ತು ಯಶಸ್ಸು ಸಾಧಿಸುವ ಸಾಧಕರನ್ನಾಗಿ ಪರಿವರ್ತಿಸುವ ಹೊಣೆ ಮತ್ತು ಶಿಕ್ಷಕರ ಸೇವೆ ಅವಿಸ್ಮರಣೀಯ” ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್‌ರಾದ ರೊ| ಡಾ.ದೇವದಾಸ್‌ರೈಯವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅವರು ರೋಟರಿಕ್ಲಬ್ ದೇರಳಕಟ್ಟೆ ಸಂಸ್ಥೆಯ ಆಶ್ರಯದಲ್ಲಿ ಸೆ.24 ರಂದು ಹೋಟೇಲ್ ಕಂಪರ್ಟ್ಇನ್ ಸಭಾಂಗಣದಲ್ಲಿ ಜರಗಿದ “ಶಿಕ್ಷಕರ ದಿನಚಾರಣೆ” ಯ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ವೃತ್ತಿಪರ ಸೇವೆಯ ಅಂಗವಾಗಿ ಹಾಗೂ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ವಾರ್ಷಿಕರಾಷ್ಟ್ರ ನಿರ್ಮಾತ ವಾರ್ಷಿಕ ಪ್ರಶಸ್ತಿಯನ್ನು ಸರಕಾರಿ ಪ್ರೌಢಶಾಲಾ ಕಲ್ಲರಕೋಡಿಯ ಕನ್ನಡ ಶಿಕ್ಷಕಿ ಜಯಲಕ್ಷ್ಮೀ ನಾಯಕ್ ಹಾಗೂ ಸರಕಾರ ಪ್ರೌಢಶಾಲೆ ಬಬ್ಬುಕಟ್ಟೆಯ ಕನ್ನಡ ಶಿಕ್ಷಕಿ ಜ್ಯೋತಿ ಲೋಕೇಶ್ ಅವರಿಗೆಅವರು ಸಲ್ಲಿಸಿದ ಅನುಪಮ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿಗೆ ಪ್ರತಿಕ್ರಿಯಿಸಿ ಮಾತನಾಡಿದ ಶಿಕ್ಷಕಿಯರು ಪ್ರಶಸ್ತಿಯು ಬಯಸದೆ ಬಂದ ಭಾಗ್ಯ ಎಂದು ನುಡಿದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಅಧ್ಯಕ್ಷರಾದ ರೋ| ಕೆ.ರವೀಂದ್ರ ಶೆಟ್ಟಿಯವರು ಶಿಕ್ಷಕರ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಗುರುವಂದನೆಯನ್ನು ಸಲ್ಲಿಸಿದರು. ಸಹಾಯಕ ಗವರ್ನರ್‌ರಾರದ ರೊ| ಪಿ.ಡಿ. ಶೆಟ್ಟಿಯವರು ಶಿಕ್ಷಕರ ವೃತ್ತಿ ಅತೀ ಗೌರವಾನ್ವಿತವಾಗಿದ್ದು ಕರ್ತವ್ಯ ಮತ್ತು ಸಮಯ ಪ್ರಜ್ಞೆಯನ್ನು ಪರಿಪಾಲಿಸುವ ವೃತ್ತಿಯಾಗಿದೆ ಎಂದು ನುಡಿದರು.ಸಂಸ್ಥೆಯ ಅಧ್ಯಕ್ಷೆ ರೋ| ಲತಾ ವಿಕ್ರಮ್ ಸ್ವಾಗತಿಸಿ ಸಂಸ್ಥೆಯ ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯದರ್ಶಿ ರೋ| ಶ್ರೀಮತಿ ಸುಜಾತ ಶೆಟ್ಟಿಯವರು ಮಾಸಿಕ ವರದಿ ಮಂಡಿಸಿದರು.ವೇದಿಕೆಯಲ್ಲಿ ಚುನಾಯಿತ ಗವರ್ನರ್ ರೋ| ವಿಕ್ರಮ್‌ದತ್ತ ಹಾಗೂ ಮಾಜಿ ಅಧ್ಯಕ್ಷರಾದ ರೋ| ಜೆ.ಪಿ.ರೈಯವರು ಉಪಸ್ಥಿತರಿದ್ದರು. ರೋ| ಡಾ| ಅನಂತನ್ ವಂದಿಸಿದರು.
ಕಾರ್ಯದರ್ಶಿ