ಮುಗ್ಧ ಮಕ್ಕಳ ಸೇವಾ ಕಾರ್ಯ ದೈವಿಕ ಕಾರ್ಯಕ್ಕೆ ಸಮಾನ – ಪ್ರೋ| ಡಾ| ಎಡಪಡಿತ್ತಾಯ

ಮಂಗಳೂರು ನ. ೨೭: ನಗರದ ಸುತ್ತಮುತಲಿನಲ್ಲಿ ಕಾರ್ಯಚರಿಸುತ್ತಿರುವ ೧೦ ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರದ ಸುಮಾರು ೪೦೦ ಮಕ್ಕಳಿಗೆ ಒದಗಿದ ಸುವರ್ಣ ಅವಕಾಶ, ಸಂತಸ, ಸಂಭ್ರಮ, ಉತ್ಸಾಹದ ವಾತಾವರಣ, ಒಡಾನಾಟದ ಅನುಬಂಧ ಮರೆಯಲಾದ ಪ್ರಬಂಧ, ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರ ಕೇಂದ್ರದ ಮಕ್ಕಳ ಜೊತೆಗೆ ಬೆರೆತು, ಮುಕ್ತ್ತವಾಗಿ ತಮ್ಮ ವ್ಯಥೆ, ಕಷ್ಟ, ಚಿಂತೆ, ವೇದನೆಯನ್ನು ಮರೆತು, ಹುರುಪು ಹಾಗೂ ಉತ್ಸಾಹದಿಂದ ನಕ್ಕು ಕುಣಿದಾಡಿದರು. ಸ್ನೇಹ ಮತ್ತು ಒಡನಾಟವನ್ನು ಸ್ಮರಿಸಿ ತಮ್ಮ ವೈಯುಕ್ತಿಕ ವಿವಿಧ ಸಿಹಿ ಕಹಿ ಅನುಭವಗಳನ್ನು ವಿನಿಮಯಿಸಿದರು. ಆಕರ್ಷಕ ಪಥÀ ಸಂಚಲನ ನೀಡಿದ ಬಳಿಕ ಸ್ಫೂರ್ತಿ ಮತ್ತು ಉತ್ಸಾಹದಿಂದ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸ ಬಿರುತಿತ್ತು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ ೨೨ನೇ ವಾರ್ಷಿಕ “ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವ” ವನ್ನು ತಾ. ೨೭.೧೧.೨೦೨೨ ರಂದು ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಆಯೋಜಿಸಲಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯವರಾದ ಪ್ರೋ. ಪಿ.ಎಸ್. ಎಡಪಡಿತ್ತಾಯ ಯವರು ಸ್ಫರ್ಧಾಕೂಟವನ್ನು ಉದ್ಘಾಟಿಸಿ ಮಕ್ಕಳ ಬೆಳವಣಿಗೆಯಲ್ಲಿ ಪೂರ್ಣ ಸಹಕಾರ ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳುವುದು, ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂನೀಯ ಎಂದು ನುಡಿದು ಸಮಾಜದಲ್ಲಿರುವ ಮಕ್ಕಳ ಅಸಮಾನತೆ ಮತ್ತು ಏಕಾಂತ ಪ್ರಜ್ಞೆಯನ್ನು ನಿರ್ಮೂಲನೆಗೊಳಿಸಿ ಅವರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿ ಮುಗ್ಧ ಮಕ್ಕಳ ಸೇವಾ ಕಾರ್ಯ ದೈವಿಕ ಕಾರ್ಯಕ್ಕೆ ಸಮಾನ ಎಂದು ನುಡಿದು ಸ್ಫರ್ಧಾಳುಗಳಿಗೆ ಶುಭ ಹಾರೈಸಿದರು.
ಸಂಘಟನಾ ಅಧ್ಯಕ್ಷ ರೋ| ಡಾ| ದೇವದಾಸ್ ರೈ ರವರು ತಮ್ಮ ಭಾಷಣದಲ್ಲಿ ಈ ೨೨ನೇ ವಾರ್ಷಿಕ “ಚಿಣ್ಣರ ಉತ್ಸವ” ಕಾರ್ಯಕ್ರಮವು ತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜ ಅಭಿವೃದ್ಧಿ ಸೇವಾ ಚಟುವಟಿಕೆಯ ಅಂಗವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರ ಉತ್ಸಾಹಕ್ಕ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ, ಉದ್ದೇಶ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ರೋ| ಸಾಯಿಬಾಬಾ ರಾವ್ ಸ್ವಾಗತಿಸಿದರು. ಜಿಲ್ಲಾ ರೋಟರಿ ವಲಯ ೨ ಸಹಾಯಕ ಗವರ್ನರ್ರಾದ ರೋ| ರಾಜ್ಗೋಪಾಲ್ ರೈ, ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ರೋ| ರಾಜೇಶ್ ಶೆಟ್ಟಿ, ರೋರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ರೋ| ಅರ್ಜುನ್ ಪ್ರಕಾಶ್, ಕಾರ್ಯದರ್ಶಿ ರೋ| ಅವಿನಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಲಾಲ್ ವಂದಿಸಿದರು, ಕು| ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ರಾದ ರೋ| ವಿಕ್ರಮ್ ದತ್ತ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.