ಬಹರೈನ್: ರೋಯಲ್ ತುಳು ಕೂಟ ಬೆಹರೈನ್ ವತಿಯಿಂದ ದಿ. ಇಂಡಿಯನ್ ಕ್ಲಬ್ ಆಶ್ರಯದೊಂದಿಗೆ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಸಾರಥ್ಯದಲ್ಲಿ ರೋಯಲ್ ಯಕ್ಷ ಐಸಿರಿ 2022 ಹವ್ಯಾಸಿ ಯಕ್ಷಕಲಾವಿದರು ಬಹರೈನ್ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ತುಳು- ಕನ್ನಡ ಯಕ್ಷಗಾನ ಶ್ರೀ ಶನೀಶ್ವರ ಮಹಾತ್ಮೆಯು ಸಪ್ಟೆಂಬರ್ 09 2022 ರಂದು ಬಹರೈನ ಇಂಡಿಯನ್ ಕ್ಲಬ್ ಸಭಾಂಗಣ ಮನಾಮದಲ್ಲಿ ನಡೆಯಿತು.


ಸಾಮೂಹಿಕ ಶನಿಪೂಜೆ , ಮಂಗಳಾರತಿ ,ಹಾಗೂ ಪ್ರಸಾದ ವಿತರಣೆಯ ನಂತರ ಶ್ರೀ ಶನಿಶ್ವರ ಮಹಾತ್ಮೇ ಯಕ್ಷಗಾನವು ನಡೆಯಿತು. ಈ ಯಕ್ಷಗಾನದಲ್ಲಿ ಭಾಗವತಿಗೆ ಡಾ. ಸತ್ಯ ನಾರಾಯಣ ಪುಣಿಚಿತ್ತಾಯ ಮತ್ತು ರೋಶನ್ ಎಸ್, ಕೋಟ್ಯಾನ್(ಸೌದಿ ಅರೇಬಿಯಾ) , ಹಿಮ್ಮೇಳನ ವಾದಕರಾಗಿ ಶ್ರೀಧರ ಪಡ್ರೆ, ಹಿರಿಯ ಕಲಾವಿದರು ಶೇಖರ ಡಿ. ಶೆಟ್ಟಿಗಾರ್(ದುಬೈ), ಹಾಸ್ಯದರಸ ಸುಂದರ ಬಂಗಾಡಿ ಯವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ವೋತ್ತಮ್ ಶೆಟ್ಟಿ ಯುಎಇ, ಹಾಗೂ ಡಾಕ್ಟರ್ ರವಿ ಶೆಟ್ಟಿ ಕತ್ತರ್ ಉಪಸ್ಥಿತರಿದ್ದರು.