ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಇದೇ ಸಭಾಂಗಣದಲ್ಲಿ ವಿವಿಧ ಶಿಬಿರವನ್ನು ಹಮ್ಮಿಕೊಂಡಿದ್ದು, ಗ್ರಾ.ಪಂ. ವ್ಯಾಪ್ತಿಯ ಹೆಚ್ಚಿನ ಗ್ರಾಮಸ್ಥರು ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದರು ಎಂದರು.
ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಅವರು ಮಾತನಾಡಿ, ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ಸಮಾನ ರೀತಿಯಲ್ಲಿ ದೊರೆಯಬೇಕು. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಬಾಕಿಯಾದ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಪಂಚಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಸರಕಾರದ ಯೋಜನೆಗಳ ಅನುಷ್ಠಾನಗೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಮಾತನಾಡಿ, ಸಾರ್ವಜನಿಕರಿಗೆ ಸಿಗುವಂತಹ ಪಂಚಗ್ಯಾರಂಟಿ ಯೋಜನೆಯಡಿ ಬಿಟ್ಟು ಹೋಗಿರುವ ಅರ್ಜಿಯನ್ನು ವಿಲೇವಾರಿ ಮಾಡಿ ಅನುಷ್ಠಾನಗೊಳಿಸುವ ಇಂತಹ ಶಿಬಿರವು ಉತ್ತಮವಾಗಿದೆ. ಸರಕಾರದಿಂದ ದೊರೆಯುವ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ದೊರೆಯಬೇಕಾದರೆ ಅದು ಸಮಾನತೆಯಿಂದ ಎಲ್ಲರಿಗೂ ಸಿಗುವ ಯೋಜನೆಗಳಾಗಿರಬೇಕು ಎಂದರು.
ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯ, ನ್ಯಾಯವಾದಿ ಅವಿನಾರ್ ಬೈತಡ್ಕ ಮಾತನಾಡಿ, ಪಂಚಗ್ಯಾರಂಟಿ ಯೋಜನೆಯ ಅನುಷ್ಟಾನಕ್ಕೆ ಸರಕಾರದಿಂದ ಎಲ್ಲಾ ತಾಲೂಕಿನಲ್ಲಿ ಸಮಿತಿಯನ್ನು ಮಾಡಿಕೊಂಡು ಸಮಾನ ರೀತಿಯಲ್ಲಿ ಎಲ್ಲರಿಗೂ ಪಂಚಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗಬೇಕು ಎಂಬ ದೃಷ್ಟಿಯನ್ನು ಇಟ್ಟುಕೊಂಡು ಇಂತಹ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ಪಡೆದುಕೊಳ್ಳಬೇಕು ಎಂದರು. ಉದನೆಯಲ್ಲಿ ಬಸ್ ನಿಲುಗಡೆಗೊಳಿಸುವಲ್ಲಿ ಪಂಚಿಗ್ಯಾರಂಟಿ ಅನುಷ್ಟಾನ ಸಮಿತಿಯಿಂದ ಸಾಧ್ಯವಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ನಮಗೆ ಸಿಗಲಿಲ್ಲ ಎಂದರೆ ಯಾವುದೇ ಕಾರಣಕ್ಕೂ ಸರಕಾರ ಕಾರಣವಾಗುವುದಿಲ್ಲ, ಬದಲಾಗಿ ನಾವೇ ಕಾರಣರಾಗಿರುತ್ತೇವೆ. ನಮ್ಮ ಕೆಲವೊಂದು ದಾಖಲೆಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ನಾವು ಯೋಜನೆಯಿಂದ ವಂಚಿತರಾಗಿರುತ್ತೇವೆ. ನಮ್ಮೆಲ್ಲರ ದಾಖಲೆಗಳನ್ನು ಪ್ರಥಮವಾಗಿ ಸರಿಪಡಿಸಿಕೊಂಡು ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಯೋಜನೆಯ ಈ ತೋತು ಮಾಡಲು ಗುತ್ತದೆಂಲಕ ಅವರ ದಾಖಲೆಗಳನ್ನು ಸರಿಪಡಿಸಿ ಪ್ರಯೋಜನ ಸಿಗುವಂತೆ
ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯೆ ಗೌರಿ ಕಾರ್ಲಾಡಿ ಮಾತನಾಡಿ, ಸಿದ್ದರಾಮಯ್ಯ ಸರಕಾರ ಪಂಚಗ್ಯಾರಂಟಿ ಯೋಜನೆಯನ್ನು ತಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಅವತ್ತು ಶಕ್ತಿ ಯೋಜನೆಯ ದಮುಖಾಂತರ ಮಹಿಳೆಯರು ದೂರದ ದೇವಸ್ಥಾನಕ್ಕೆ ಪ್ರಯಾಣಿಸುವ ಅವಕಾಶ ಸಿಕ್ಕಿದೆ ಎಂದರು.
ಕಡಬ ತಾಲೂಕು ಆಕ್ರಮ ಸಕ್ರಮ ಸಮಿತಿ ಸದಸ್ಯ ಪಿ.ಪಿ ವರ್ಗಿಸ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಕಡಬ ತಾಲೂಕು ಪಂಚಗ್ಯಾರಂಟಿ ಯೋಜನೆಗಳಸದಸ್ಯರಾದ ರಾಘವೇಂದ್ರ ದೈಪಿಲ, ಹರಿಣಾಕ್ಷಿ ಬನಾರಿ, ಭವಾನಿಶಂಕರ್,ಸತೀಶ್, ಎ.ಕೆಬಶೀರ್, ಸೈಮನ್ ಸಿ.ಜೆ.ಮಾಧವ ಪ್ರಜಾರಿ, ಹನೀಫ್ ಕಡಬ, ದೀಕ್ಷಿತ್, ಗಂಗಾಧರ ಶೆಟ್ಟಿ, ಜಗದೀಶ್, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಮಂಗಳ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ಶಿರಸ್ತೆದಾರ ಶಂಕರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಮಂಜಪ್ಪ, ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಪುಂಡರೀಕರವರು ಉಪಸ್ಥಿತರಿದ್ದರು. ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸಂದೇಶ್ ಕೆ..ಎನ್ ಪ್ರಾಸ್ತಾವಿಕ ಮಾತನಾಡಿದರು. ಕಾಣಿಯೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಘಂ ಬಿ.ಎನ್ ಸ್ವಾಗತಿಸಿ, ಸವಣೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿವಂದಿಸಿದರು. ಅನುಷ್ಠಾನ ಸಮಿತಿ ನೋಡೆಲ್ ಅಧಿಕಾರಿಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಕುಮಾರ್ ಸೊರಕೆ,
ಶೀನಪ್ಪ ಗೌಡ ಬೈತಡ್ಕ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಅಶ್ರಫ್ ಶೇಡಿಗುಂಡಿ, ರಾಮಣ್ಣ ಗೌಡ ಮುಗರಂಜ, ವಿಠಲ ಗೌಡ ಆಗಳಿ, ಲೋಹಿತಾಕ್ಷ ಕೆಡೆಂಜಿಕಟ್ಟಿ, ತಾರಾನಾಥ ಇಡ್ಕಡ್ಕ, ಸೀತಾರಾಮ ಗೌಡ ಮುಂಡಾಳ ಸೇರಿದಂತೆ ಕಾಣಿಯೂರು, ಸವಣೂರು, ಬೆಳಂದೂರು ಗ್ರಾ.ಪಂ.ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ. ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.