ಮುಂಬಯಿ: ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ಮತ್ತು ಕರಾವಳಿ ಲೇಖಕಿಯರ- ವಾಚಕಿಯರ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರೂಪಕಲಾ ಆಳ್ವ ರಚನೆಯ ಶಿವ ಸುಗಿಪು ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ತುಳು ಭಕ್ತಿಗೀತೆಗಳ ವೀಡಿಯೋ ಆಲ್ಬಂ ಬಿಡುಗಡೆ ಕಾರ್ಯಕ್ರಮವು ಮಾ. 7ರಂದು ರಾತ್ರಿ 7.30ರಿಂದ ವರ್ಚುವಲ್ ವೇದಿಕೆಯಲ್ಲಿ ನಡೆಯಲಿದೆ.
26 ವರ್ಷಗಳ ಹಿಂದೆ ಧ್ವನಿಸುರುಳಿ ಮೂಲಕ ಹೊರಬಂದಿದ್ದ ಈ ಹಾಡುಗಳು ಮತ್ತೆ ದೃಶ್ಯ ಸಂಯೋಜನೆಯೊಂದಿಗೆ ನವೀನವಾಗಿ ಮೂಡಿಬರಲಿದ್ದು, ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಆಶೀರ್ವಚನ ನೀಡಲಿದ್ದಾರೆ. ಎಟಿಎಸ್ ಕತಾರ್ ಆಡಳಿತ ನಿರ್ದೇಶಕ ರವಿ ಶೆಟ್ಟಿ ಮೂಡಂಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯವಾದಿ ಹಾಗೂ ನಾಟಕಕಾರ ಶಶಿರಾಜ್ ಕಾವೂರು ಶಿವ ಸುಗಿಪು – ತುಳು ಭಕ್ತಿಗೀತೆಗಳ ವೀಡಿಯೋ ಆಲ್ಬಂ ಬಿಡುಗಡೆ ಮಾಡಲಿದ್ದಾರೆ. ಯಶೋದಾ ಮೋಹನ್ ಹಾಡುಗಳನ್ನು ಪರಿಚಯಿಸಲಿದ್ದಾರೆ.
ಲೇಖಕಿಯರ ಸಂಘದ ಅಧ್ಯಕ್ಷೆ ಡಾ। ಜ್ಯೋತಿ ಚೇಳ್ಯಾರು, ಹಿರಿಯ ಸಾಹಿತಿ ಚಂದ್ರಕಲಾ ನಂದಾವರ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಿರಿಯ ಸಂಗೀತ ಸಂಯೋಜಕ ವಸಂತ ಕದ್ರಿ, ಖ್ಯಾತ ಸಿನೆಮಾ ಗಾಯಕ ಐಲೇಸಾದ ರಮೇಶ್ ಚಂದ್ರ, ಖ್ಯಾತ ಕೀಬೋರ್ಡ್ ವಾದಕ ಮುರಳೀಧರ್ ಕಾಮತ್ ಪಾಲ್ಗೊಳ್ಳಲಿದ್ದಾರೆ. ಗೋಪಾಲ್ ಪಟ್ಟೆ ತಾಂತ್ರಿಕ ಸಹಕಾರ ನೀಡಲಿದ್ದು, ಐಲೇಸಾದ ಎಲ್ಲ ಅಭಿಮಾನಿಗಳು, ಬಂಧುಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಐಲೇಸಾ ಮುಂಬಯಿ ಸಂಚಾಲಕ, ರಂಗಕಲಾವಿದ ಸುರೇಂದ್ರ ಮಾರ್ನಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.