Saturday, April 26, 2025
HomeUncategorizedಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

ಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

ಚಿತ್ರ: “ಮಂಜೂಷಾ” ವಿಂಟೇಜ್ ಕಾರುಗಳ ಸಂಗ್ರಹಾಲಯಕ್ಕೆ ರಶ್ಯಾದ ಪ್ರವಾಸಿಗರು ಭೇಟಿ ಹಳೆ ಕಾರುಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಉಜಿರೆ: ರಶ್ಯಾದಿಂದ ಏಳು ಜನ ಪ್ರವಾಸಿಗರ ತಂಡ ಧರ್ಮಸ್ಥಳಕ್ಕೆ ಶನಿವಾರ ಆಗಮಿಸಿದ್ದು, ದೇವರ ದರ್ಶನ ಮಾಡಿ, ಮಂಜೂಷಾ ವಿಂಟೇಜ್ ಕಾರುಗಳ ಸಂಗ್ರಹಾಲಯ, ಮಂಜೂಷಾ ವಸ್ತು ಸಂಗ್ರಹಾಲಯ, ಅನ್ನಪೂರ್ಣದಲ್ಲಿ ಅನ್ನದಾಸೋಹದ ವ್ಯವಸ್ಥೆ, ಬಾಹುಬಲಿ ಬೆಟ್ಟ, ಉದ್ಯಾನ ಮೊದಲಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಜೂಷಾ ವಿಂಟೇಜ್ ಕಾರುಗಳ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾದ ಹಳೆ ಕಾರುಗಳು, ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಪ್ರದರ್ಶನಕ್ಕಿಟ್ಟ ಅಪೂರ್ವ ಕೆಮರಾಗಳು, ಹಳೆಯ ವಾಹನಗಳು, ನಾಣ್ಯಗಳು, ಜಾನಪದೀಯ ವಸ್ತುಗಳ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ಸ್ವಚ್ಛತೆ, ಶಿಸ್ತು, ಅಚ್ಚುಕಟ್ಟು ಹಾಗೂ ಆತಿಥ್ಯದ ಬಗ್ಗೆ ಅಪಾರ ಸಂತಸ ಮತ್ತು ಶ್ಲಾಘನೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular