Wednesday, January 15, 2025
Homeಉಜಿರೆಎಸ್.ಡಿ.ಎಂ. ಕಾಲೇಜು: ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ರಜತಮಹೋತ್ಸವ

ಎಸ್.ಡಿ.ಎಂ. ಕಾಲೇಜು: ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ರಜತಮಹೋತ್ಸವ

.
ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಮನಃಶಾಸ್ತç ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ೨೫ ವರ್ಷಗಳ ಸಾರ್ಥಕಸೇವೆಯನ್ನು ಪೂರೈಸಿದ್ದು, ರಜಮಹೋತ್ಸವ ಆಚರಣೆಯ ಅಂಗವಾಗಿ ಡಿಸೆಂಬರ್ ೧೩ ಮತ್ತು ೧೪ರಂದು (ಶುಕ್ರವಾರ ಮತ್ತು ಶನಿವಾರ) ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ “ಬ್ರೇಕಿಂಗ್ ಬ್ಯಾರಿಯರ್ಸ್: ಅಡ್ವಾನ್ಸಿಂಗ್ ಸೈಕಲಾಜಿಕಲ್ ವೆಲ್ ಬೀಯಿಂಗ್ ಅಕ್ರಾಸ್ ಬಾಡರ‍್ಸ್” ಎಂಬ ವಿಷಯದಲ್ಲಿ ಅಂತಾರಾಷ್ಟಿçÃಯ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ತಿಳಿಸಿದರು.
ಅವರು ಸೋಮವಾರ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮನಃಶಾಸ್ತç ಅಧ್ಯಯನಕ್ಕೆ ವಿಶೇಷ ಬೇಡಿಕೆ ಇದ್ದು ಪ್ರತಿವರ್ಷ ಸ್ನಾತಕೋತ್ತರ ಅಧ್ಯಯನ ವಿಭಾಗಕ್ಕೆ ೩೦ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದ್ದು ಶಿಕ್ಷಣ ಪೂರೈಸಿದವರಿಗೆಲ್ಲ ಉದ್ಯೋಗಾವಕಾಶ ಲಭಿಸಿದೆ.
ಸಂಶೋಧನಾ ವಿಭಾಗವು ಮಂಗಳೂರು ವಿ.ವಿ.ಯಿಂದ ಮಾನ್ಯತೆಯನ್ನು ಹೊಂದಿದೆ. ವಿಭಾಗ ಮುಖ್ಯಸ್ಥರಾದ ಡಾ. ವಂದನಾ ಜೈನ್, ಡಾ. ಮಹೇಶ್‌ಬಾಬು ಮತ್ತು ಡಾ. ಸುಧೀರ್, ಕೆ.ವಿ. ಸಂಶೋಧನಾ ಮಾರ್ಗದರ್ಶಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಜತಮಹೋತ್ಸವ ಆಚರಣೆಯ ಅಂಗವಾಗಿ ವರ್ಷದಲ್ಲಿ ೨೫ ವಿಶೇಷ ಮೌಲಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ರಕ್ಷಣೆ ಬಗ್ಯೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮ, ಆಪ್ತಸಲಹೆ, ಆಪ್ತಸಮಾಲೋಚನೆ ಹಾಗೂ ಕೌಶಲಅಭಿವೃದ್ಧಿ ಮೊದಲಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ತರಗತಿ ಪ್ರಾರಂಭಿಸಲಾಗುವುದು ಎಂದು ಪ್ರೊ. ಕುಮಾರ ಹೆಗ್ಡೆ ಪ್ರಕಟಿಸಿದರು.
ವಿಚಾರ ಸಂಕಿರಣದ ಸಂಯೋಜಕಿ ಡಾ. ವಂದನಾ ಜೈನ್ ಮತ್ತು ಸಂಘಟನಾ ಕಾರ್ಯದರ್ಶಿ ಅಶ್ವಿನಿ ಎಸ್. ಶೆಟ್ಟಿ ಪೂರಕ ಮಾಹಿತಿ ನೀಡಿ, ವಿಚಾರಸಂಕಿರಣದಲ್ಲಿ ಭಾಗವಹಿಸಲು ಈಗಾಗಲೆ ೨೫೮ ಮಂದಿ ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದು, ದೇಶ-ವಿದೇಶಗಳಿಂದ ೩೦೦ ಮಂದಿ  ಭಾಗವಹಿಸುವ ನಿರೀಕ್ಷೆ ಇದೆ.  ವಿವಿಧ ಸಮಿತಿಗಳನ್ನು ರಚಿಸಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ ಎಂದರು.
ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಪ್ರೊ. ವಿಶ್ವನಾಥ್, ಪಿ., ಮನಃಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ವಂದನಾ ಜೈನ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭ: ಡಿ. ೧೩ ರಂದು ಶುಕ್ರವಾರ ಪೂರ್ವಾಹ್ನ ಗಂಟೆ ಹತ್ತಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿಚಾರಸಂಕಿರಣ ಉದ್ಘಾಟಿಸುವರು.
ಪ್ರಾಂಶುಪಾಲ ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸುವರು.
ಅಮೇರಿಕಾದ ಪ್ರೊ. ಕರೋಲ್ ಡಿ. ರಿಫ್ ವಿಶೇಷ ಉಪನ್ಯಾಸ ನೀಡುವರು.
ನವದೆಹಲಿಯ ಡಾ. ರಮೇಶ್ ಸಾಲಿಯಾನ್, ಪ್ರೊ. ಎಂ. ವೈ. ಮಂಜುಳಾ, ಬೆಂಗಳೂರಿನ ಕ್ಷೇಮವನ ಪ್ರಕೃತಿಚಿಕಿತ್ಸಾ ಕೇಂದ್ರದ ಮುಖ್ಯನಿರ್ವಹಣಾಧಿಕಾರಿ ಶ್ರದ್ಧಾಅಮಿತ್, ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ. ವಿಶ್ವನಾಥ್ ಪಿ., ಶುಭಾಶಂಸನೆ ಮಾಡುವರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ, ಜಂಟಿಸAಘಟನಾ ಕಾರ್ಯದರ್ಶಿಗಳಾದ ಡಾ. ಮಹೇಶ್‌ಬಾಬು, ಅಶ್ವಿನಿ, ಎಚ್. ಸಿಂಧು, ವಿ., ರಮ್ಯಾ ಕೆ. , ಡಾ. ಸುಧೀರ್ ಕೆ.ವಿ. ಮತ್ತು ಪದ್ಮಶ್ರೀ, ಕೆ. ಹಾಗೂ ವಿದ್ಯಾರ್ಥಿ ಸಂಯೋಜಕರಾದ ಚೈತನ್ಯ ಶೇಟ್ ಮತ್ತು ಕುಮಾರಿ ಜಾಹ್ನವಿ, ಎಂ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

RELATED ARTICLES
- Advertisment -
Google search engine

Most Popular