ಮೂಡಬಿದಿರೆ: ಹೆಣ್ಣು ಸಮಾಜದ ಕಣ್ಣು, ಹೆಣ್ಣಿನಿಂದ ಮಾತ್ರ ಒಂದು ಕುಟುಂಬ ಹಾಗೂ ಸಮಾಜದ ಏಳ್ಗೆ ಸಾಧ್ಯ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಎಸ್. ಎನ್. ಮೂಡಬಿದರೆ ಪಾಲಿಟೆಕ್ನಿಕ್ ನಲ್ಲಿ ಕಾಲೇಜಿನ ಆಂತರಿಕ ದೂರು ಸಮಿತಿಯ ಸಂಯೋಜಕರಾದ ನೊರೋನ ತರಿನಾ ರೀಟಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಡ್ವಕೇಟ್ ಮೇಘರಾಣಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಆಂತರಿಕ ದೂರು ಸಮಿತಿಯ ಸದಸ್ಯರಾದ ಸುಪ್ರಿಯಾ ಎಸ್ ಹಾಗು ರಶ್ಮಿ ಶೆಟ್ಟಿಗಾರ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರಾದ ರಾಜೇಶ್ವರಿ ಕೆಎನ್, ದಿವ್ಯಾ ಶೆಣೈ, ರಶ್ಮಿತಾ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ವಿಭಾಗದ ಮಹಿಳಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಸಿಬ್ಬಂದಿ ವರ್ಗದವರಿಗೆ ಆಟೋಟ ಚಟುವಟಿಕೆಗಳನ್ನು ನಡೆಸಲಾಯಿತು. ದೀಕ್ಷಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಬಂದಂತ ಅತಿಥಿಗಳನ್ನು ರಶ್ಮಿ ಶೆಟ್ಟಿಗಾರ್ ಸ್ವಾಗತಿಸಿದರು. ದಿವ್ಯ ಇವರು ಅತಿಥಿ ಪರಿಚಯ ಮಾಡಿದರು. ಹಾಗೆ ಸಪ್ನಾ ಇವರು ಧನ್ಯವಾದ ಸಮರ್ಪಣೆಗೈದರು. ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾ ವೈ. ಎಂ ರವರು ನಿರೂಪಿಸಿದರು.
ಎಸ್. ಎನ್. ಮೂಡಬಿದಿರೆ ಪಾಲಿಟೆಕ್ನಿಕ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
RELATED ARTICLES