Monday, December 2, 2024
Homeದಾವಣಗೆರೆನಲ್ಲೂರು ಲಕ್ಷ್ಮಣ್‌ ರಾವ್‌ರವರಿಗೆ ಎಸ್.ಪಿ.ಎ.ಆರ್. ಪ್ರತಿಷ್ಠಾನದಿಂದ “ಸಾಂಸ್ಕೃತಿಕ ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ

ನಲ್ಲೂರು ಲಕ್ಷ್ಮಣ್‌ ರಾವ್‌ರವರಿಗೆ ಎಸ್.ಪಿ.ಎ.ಆರ್. ಪ್ರತಿಷ್ಠಾನದಿಂದ “ಸಾಂಸ್ಕೃತಿಕ ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ

ದಾವಣಗೆರೆ-ನವಂಬ‌ರ್,

ದಾವಣಗೆರೆಯ ಪ್ರೇಮಾ ಅರುಣಾಚಲ ಎನ್. ರೇವಣಕ‌ರ್ ಪ್ರತಿಷ್ಠಾನದಿಂದ ನವಂಬರ್ 6 ರಂದು ಬುಧವಾರ ದಾವಣಗೆರೆಯ ವಿನೋಬನಗರದ 1ನೇ ಮುಖ್ಯರಸ್ತೆಯಲ್ಲಿ ಗೌರಮ್ಮ ನರಹರಿ ಶೇಟ್ ಸಭಾಂಗಣದಲ್ಲಿ ನಲ್ಲೂರು ಲಕ್ಷ್ಮಣ್‌ ರಾವ್ ನರಹರಿ ರೇವಣಕರ್‌ರವರಿಗೆ “ಸಾಂಸ್ಕೃತಿಕ ಸಮಾಜ ಸೇವಾ ರತ್ನ” ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಳೆದ ಐದು ದಶಕಗಳಿಂದ ಶಿಕ್ಷಣ, ಸಾಂಸ್ಕೃತಿಕ, ಸಮಾಜ ಸೇವೆ, ಆಧ್ಯಾತ್ಮ ಪರಂಪರೆಯ ಸಾಧನೆಗಳನ್ನು ಗುರುತಿಸಿ ಅವರ 70ನೇ ವರ್ಷದ ಹುಟ್ಟು ಹಬ್ಬ, ಶ್ರೀ ಭೀಮರಥ ಶಾಂತಿ ಸೇರಿದಂತೆ ಈ ಪ್ರಶಸ್ತಿಗೆ ಆಯ್ಕೆಯಾದ ಲಕ್ಷ್ಮಣ್‌ ರಾವ್ ರವರಿಗೆ ಪ್ರತಿಷ್ಠಾನ ಸೇರಿದಂತೆ ದೈವಜ್ಞ ಸಮಾಜ, ಕಲಾಕುಂಚ, ರೇವಣಕ‌ರ್ ಪರಿವಾರ, ನವಜ್ಯೋತಿ ಕ್ಲಬ್, ಶಾರದಾ ವಿದ್ಯಾಸಂಸ್ಥೆ, ವಿವಿಧ ಸಂಸ್ಥೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನ ದಿಂದ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular