Saturday, April 26, 2025
Homeದಾವಣಗೆರೆಎಸ್.ಪಿ.ಎ.ಆರ್. ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ“ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಹ್ವಾನ

ಎಸ್.ಪಿ.ಎ.ಆರ್. ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ
“ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಹ್ವಾನ

ದಾವಣಗೆರೆ: ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ಪ್ರತೀ ವರ್ಷದಂತೆ ಈ ವರ್ಷವೂ 2024-25ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಸಾರ್ವಜನಿಕ ಪರೀಕ್ಷೆಯಲ್ಲಿ ಶೇಕಡ 85% ರಷ್ಟು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಮಕ್ಕಳಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿಯನ್ನು ಅದ್ದೂರಿಯಾಗಿ ಪ್ರದನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ.

2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬಂದ ಮೇಲೆ ದಾವಣಗೆರೆಯ ಗೌರಮ್ಮ ನರಹರಿ ಶೇಟ್ ಕಲ್ಯಾಣ ಮಂಟಪದಲಿ 2025ನೆ ಜೂನ್ 15 ರಂದು ಭಾನುವಾರ ನಡೆಯಲಿರುವ ಈ ಸಂಭ್ರಮದ ಸಮಾರಂಭದಲ್ಲಿ ನಾಡಿನ ಗಣ್ಯ ಮಾನ್ಯರು ಆಗಮಿಸಲಿದ್ದು ಪ್ರತಿಭಾವಂತ ಮಕ್ಕಳನ್ನು ಮಂಗಳವಾದ್ಯದೊಮದಿಗೆ, ಮುತ್ತೈದೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಕನ್ನಡ ತಿಲಕವಿಟ್ಟು ಕನ್ನಡಾರತಿ ಬೆಳಗಿ, ವೇದಿಕೆಯಲ್ಲಿ ಪ್ರತ್ಯೇಕವಾದ ಮಂಟಪದ ಸಿಂಹಾಸನದಲ್ಲಿ ಕೂರಿಸಿ ತಲೆಯ ಮೇಲೆ ಕಿರೀಟವಿಟ್ಟು ಅವರದೇ ಭಾವಚಿತ್ರವಿರುವ ತಂದೆ-ತಾಯಿಯವರ ಹೆಸರಿನೊಂದಿಗೆ ಅಭಿನಂದನಾ ಪತ್ರ ವಿತರಿಸಿ ಪುಷ್ಪವೃಷ್ಠಿಯೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.

ದಿನಾಂಕ 10-05-2025 ರೊಳಗೆ ಪ್ರವೇಶ ಪತ್ರ ಪಡೆದು ಭರ್ತಿ ಮಾಡಿ “ಅರುಣಾ ಜ್ಯೂಯರ‍್ಸ್” #716/2, ಮಂಡಿಪೇಟೆ, ದಾವಣಗೆರೆ-577001. ಈ ವಿಳಾಸಕ್ಕೆ ಕಳಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೇಮಾ ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8147263552, 9341969084, 9481359009 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷ್ಮಣರಾವ್ ರೇವಣಕರ್ ಮತ್ತು ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.

RELATED ARTICLES
- Advertisment -
Google search engine

Most Popular