ದಾವಣಗೆರೆ:ದಾವಣಗೆರೆಯ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ಪ್ರತೀ ವರ್ಷದಂತೆ ಈ ವರ್ಷವೂ ೦೨೩-೨೪ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಶೇಕಡ ೮೫% ರಷ್ಟು ಮತ್ತು ಅದಕ್ಕೂ ಹೆಚ್ಚು ಅಂಕ ಪಡೆದ ದೈವಜ್ಞ ಸಮಾಜ ಬಾಂಧವರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ “ಶಾರದಾ ಪುರಸ್ಕಾರ-೨೦೨೪” ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ.
ನಾಡಿನ ಖ್ಯಾತ ಹಿರಿಯ ಸಾಹಿತ್ಯ ದಿಗ್ಗಜರಿಂದ ಭವ್ಯ ದಿವ್ಯ ವೇದಿಕೆಯಲ್ಲಿ ಅದ್ದೂರಿಯಾಗಿ ಪ್ರಶಸ್ತಿ ಪ್ರದಾನಿಸುವ ಈ ಸುವರ್ಣಾವಕಾಶಕ್ಕೆ ಭಾಜನರಾಗುವವರು ಹೆಚ್ಚಿನ ಮಾಹಿತಿಗೆ ೯೩೪೧೯೬೯೦೮೪, ೮೧೪೭೨೬೩೫೫೨ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷö್ಮಣ್‌ರಾವ್ ರೇವಣಕರ್ ವಿನಂತಿಸಿದ್ದಾರೆ. ಪ್ರವೇಶ ಪತ್ರ ಪಡೆದು ಭರ್ತಿ ಮಾಡಿಕೊಡುವ ಕೊನೆಯ ದಿನಾಂಕ ೨೫-೦೫-೨೦೨೪