ದಾವಣಗೆರೆ : ದಾವಣಗೆರೆಯ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ನಲ್ಲೂರು
ಲಕ್ಷ್ಮಣ್ ರಾವ್‌ರವರ 5 ದಶಕದ ಕಲೆ, ಸಾಹಿತ್ಯ, ಸಮಾಜಸೇವೆ, ಧಾರ್ಮಿಕ, ವಂಶಾವಳಿ ಪರಂಪರೆಯ ಪುಸ್ತಕ ರಚನೆಯ ಸಾಧನೆಗಳನ್ನು ಗುರುತಿಸಿ “ಸಾಂಸ್ಕೃತಿಕ ಸಮಾಜ ಸೇವಾ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ
ಮಾಡಲಾಯಿತು ಎಂದು ಪ್ರತಿಷ್ಠಾನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ದಾವಣಗೆರೆಯ ವಿನೋಬ ನಗರದ 1ನೇ ಮುಖ್ಯರಸ್ತೆಯಲ್ಲಿರುವ ಗೌರಮ್ಮ ನರಹರಿ ಶೇಟ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಮಾರಂಭದ ವೇದಿಕೆಯಲ್ಲಿ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್, ಅಧ್ಯಕ್ಷರಾದ ಪ್ರೇಮಾ ಅರುಣಾಚಲ ರೇವಣಕರ್, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ, ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ನಲ್ಲೂರು ಕಾರ್ತಿಕ್ ಲಕ್ಷ್ಮಣ್ ರೇವಣಕರ್, ಸುಪ್ರಿತಾ ಕಾರ್ತಿಕ್,ಸಂಧ್ಯಾ ಲಕ್ಷ್ಮಣ್ ರೇವಣಕರ್, ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಮುಂತಾದವರು ಉಪಸ್ಥಿತರಿದ್ದರು.