Sunday, July 14, 2024
Homeರಾಜ್ಯಎಸ್.ಎಸ್.ಡಿ.ಎಸ್. ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ “ಸರಸ್ವತಿ ಪುರಸ್ಕಾರ”ಕ್ಕೆ ಆಹ್ವಾನ

ಎಸ್.ಎಸ್.ಡಿ.ಎಸ್. ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ “ಸರಸ್ವತಿ ಪುರಸ್ಕಾರ”ಕ್ಕೆ ಆಹ್ವಾನ

ದಾವಣಗೆರೆ : ಉಡುಪಿ ಜಿಲ್ಲೆಯ ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ 2023-24ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು ಅಂಕ 625 ಕ್ಕೆ 600 ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ನಾಗೇಶ್ ಸಂಜೀವ ಕಿಣಿ ತಿಳಿಸಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ಅವರದ್ದೇ ಭಾವಚಿತ್ರವಿರುವ, ಅವರ ತಂದೆ-ತಾಯಿ, ವ್ಯಾಸಂಗ ಮಾಡಿದ ವಿದ್ಯಾ ಸಂಸ್ಥೆಯ ಹೆಸರಿನೊಂದಿಗೆ ಸನ್ಮಾನ ಪತ್ರ, ಚಿನ್ನದ ಲೇಪನದ ಪದಕ, ಶೃಂಗೇರಿ ಶ್ರೀ ಶಾರದಾಂಬೆಯ ಸ್ಮರಣಿಕೆ ವಿತರಿಸಲಾಗುವುದು. ಈ ಪ್ರಶಸ್ತಿಗೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪೂರ್ಣಕುಂಭ ಮಂಗಳವಾದ್ಯದೊಂದಿಗೆ ಸ್ವಾಗತಿಸಿ, ಕನ್ನಡ ಕಂಕಣಕಟ್ಟಿ, ಕನ್ನಡ ತಿಲಕವಿಟ್ಟು, ಕನ್ನಡಾರತಿ ಬೆಳಗಿ ಸ್ವಾಗತಿಸಲಾಗುವುದು. ಈ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ ಶೆಣೈಯವರ ಸನೀಹವಾಣಿ 9538732777 ಇವರಿಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಪತಿ ರಾಘವೇಂದ್ರ ಶೆಣೈಯವರು ವಿನಂತಿಸಿದ್ದಾರೆ.

ಸಂಸ್ಥೆಯ ಪೂರ್ಣ ಪ್ರಮಾಣದ ವಿಳಾಸ # 588, `ಕನ್ನಡ ಕೃಪ’, ಮೊದಲನೇ ಮಹಡಿ, ಕುವೆಂಪು ರಸ್ತೆ, (ಲಾಯರ್ ರಸ್ತೆ), ಕೆ.ಬಿ. ಬಡಾವಣೆ, ಜಯದೇವ ವೃತ್ತದೆ ಹತ್ತಿರ, ದಾವಣಗೆರೆ – 577002.

RELATED ARTICLES
- Advertisment -
Google search engine

Most Popular