ಎಂ.ಆರ್.ಪಿ.ಎಲ್. ಗೆ ಹಸ್ತಾಂತರಿಸುವ ಬಗ್ಗೆ ಎಂ.ಆರ್.ಪಿ.ಎಲ್. ಮ್ಯನೇಜಿಂಗ್ ಡೈರೆಕ್ಟಟ್ ರ್ ಜೋತೆ ಮಾತುಕತೆ ಸರಕಾರದ ಮಟ್ಟದಲ್ಲಿ ಕ್ರಮವಹಿಸಲು ಮನವಿ ಐವನ್ ಡಿ’ಸೋಜಾ.
ಕಾವೂರು ಮಾದರಿಯಲ್ಲಿ ಪಚ್ಚನಾಡಿ ಮತ್ತು ಸುರತ್ಕಲ್ ಮದ್ಯ ಮತ್ತು ಬಜಾಲ್ ನಲ್ಲಿ ಎಸ್.ಟಿ.ಪಿ ಗಳನ್ನು ಎಂ.ಅರ್.ಪಿ.ಎಲ್ ರವರ ಮುಖಾಂತರ ಕೊಳಚೆ ನೀರನ್ನು ಶುದೀಕರಿಸಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆ ಮಾಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿದಿಗಳ ಮೂಲಕ ಚರ್ಚಿಸಿ ಇಂದು ಮಂಗಳೂರು ನಗರ ಪಾಲಿಕೆಯ ಐವನ್ ಡಿ’ಸೋಜಾರವರ ಶಾಸಕರ ಕಛೇರಿಯಲ್ಲಿ ಇಂದು ನಗರ ಪಾಲಿಕೆ ಕಾರ್ಫರೇಟರ್ ಗಳ,ಎಂಆರ್.ಪಿ.ಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ಯಾಮ್ ಪ್ರಸಾದ್, ಎ.ಏಂ.ಡಿ. ಕೃಷ್ಣ ಪ್ರಸಾದ್ ಹೆಗ್ಡೆ ಅಧಿಕಾರಿಯವರಾದ ಸೂರ್ಯನಾರಾಯಣ ಇವರುಗಳ ಜೊತೆ ದೀರ್ಘವಾದ ಮಾತುಕತೆ ನಡೆಸಿ ಕೊಳಚೆ ನೀರು ಸಂಗ್ರಹಿಸಿ, ಸಾರ್ವಜನಿಕ ತೋಡುಗಳಲ್ಲಿ ಹರಿದು ಹೋಗುವ ನೀರನ್ನು ಶುದ್ದೀಕರಿಸಿ ಮತ್ತು ಬಳಕೆ ಮಾಡಲು ಕ್ರಮ ವಹಿಸಬೇಕೆಂದು ಕ್ರಮ ವಹಿಸಲು ಬಗ್ಗೆ ವಿಚಾರವನ್ನು ನಡೆಸಲಾಯಿತು.
ಪ್ರಸ್ತುತ ಜೆಪ್ಪಿನಮೊಗರು ಎಸ್.ಟಿ.ಪಿ, ಪಚ್ಚನಾಡಿ ಎಸ್.ಟಿ.ಪಿ 8.75 ಸಾಮರ್ಥ್ಯ ಸುರತ್ಕಲ್ ಮದ್ಯ 16.5 ಸಾಮರ್ಥ್ಯ ಈ ಎಲ್ಲಾ ಎಸ್.ಟಿ.ಪಿಗಳನ್ನು ಮೇಲ್ದರ್ಜೆಗೇರಿಸಲು ನೀರು ಶುದ್ದಿಖರಿಸಿಸಲು ಸುಮಾರುಇನ್ನೂರು ಕೋಟಿ ರೂಪಾಯಿಗಳ ವೆಚ್ಚ ತಗಲುವುದುಎಂದುಇದನ್ನು ಯಾವ ರೀತಿ ಹೊಂದಿಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು ಕಲುಷಿತ ನೀರು ಸಂಸ್ಕರಿಸಿ ಕೈಗಾರಿಕಾ ಗುಣಮಟ್ಟದಲ್ಲಿ ಪರಿಸರ ಮತ್ತು ತೋಡುಗಳಲ್ಲಿ ಹರಿದು ಕಲುಷಿತ ನೀರು ಶುದ್ದಿಕರಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಈ ವಿಚಾರ ವಿನಿಮಯದಲ್ಲಿ ಹಿರಿಯ ಕಾರ್ಫೋರೇಟರ್ ಶಶಿಧರ್ ಹೆಗ್ಡೆ, ಲ್ಯಾನ್ಸ್ ಲೋಟ್ ಪಿಂಟೋ, ಶಂಶುದೀನ್ ಕುದ್ರೋಳಿ, ಲತೀಫ್ ಕಂದಕ್, ಅಶ್ರಫ್ ಬಜಾಲ್,ಸತೀಶ್ ಪೆಂಗಲ್, ಹೇಮಂತ್ ಗರೋಡಿ, ತನ್ವೀರ್ ಷಾ, ಮಉಂತಾದವರು ಉಪಸ್ಥಿತರಿದ್ದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್ .ಟಿ.ಪಿ. ಕೊಳಚೆ ನೀರು ಶುದ್ಧೀಕರಣ ಘಟಕ
RELATED ARTICLES