ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ, ಆರೋಗ್ಯವೇ ಭಾಗ್ಯ, health is wealth. ಉತ್ತಮವಾದ ಆರೋಗ್ಯಕ್ಕಾಗಿ ಸ್ವಚ್ಛ, ಸಮೃದ್ಧ,ಸಮತೋಲಿತ ಆಹಾರ ಅತ್ಯವಶ್ಯಕ. ಜೊತೆಯಲ್ಲಿ ಅಡುಗೆ ಕಾರ್ಯಕ್ರಮದಲ್ಲಿ ಸ್ವಚ್ಛತೆ,ಆರೋಗ್ಯಕರ ಪರಿಸರ ನಿರ್ಮಾಣ, ಅಡುಗೆಯ ಮಹತ್ವ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರೆಲ್ಲರಿಗೂ ಅರಿವು ಮೂಡಿಸಬೇಕೆನ್ನುವ ನಿಟ್ಟಿನಲ್ಲಿ ರಾಷ್ಟೀಯ ಆಹಾರ ದಿನಾಚರಣೆಯ ಅಂಗವಾಗಿ ಬೆಂಕಿ ರಹಿತ ಅಡುಗೆಯ ಸ್ಪರ್ಧಾ ಕಾರ್ಯಕ್ರಮವನ್ನು ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೆರೀಪೇಟೆಯ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ ಆನಂದ್ ಆಚಾರ್ಯ, ಲಯನ್ ಸತೀಶ್ ಪ್ರಭು, ಶಾಲಾ ಸಂಚಾಲಕರಾದ ಲಯನ್ ಕೆ. ಸತ್ಯಶಂಕರ್ ಶೆಟ್ಟಿ, ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್.ಕೆ, ಸಂಸ್ಥೆಯ ಶಿಕ್ಷಕರಾದ ವಿವೇಕ್ ಶೆಟ್ಟಿ ನೆರವೇರಿಸಿದರು.
ಸ್ಪರ್ಧೆಯಲ್ಲಿ 3 ರಿಂದ 5 ನೆ ತರಗತಿಯ ಮಕ್ಕಳು ಮತ್ತು ಪೋಷಕರು, ಹಾಗೂ 6 ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದರು.
ಸುಮಾರು 150 ವಿದ್ಯಾರ್ಥಿಗಳು ಹಾಗೂ 35 ಪೋಷಕರು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಸ್ಪರ್ಧಾ ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಪೋಷಕ ಮಿತ್ರರು, ಶಿಕ್ಷಕ – ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.