ಮುಂಡ್ಕೂರು :ದಿನಾಂಕ 09/11/2024 ಶನಿವಾರದಂದು ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೇರಿಪೇಟೆಯಲ್ಲಿ 3 ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ನಿಟ್ಟೆ ಕಾಲೇಜಿನ ಪ್ರೊಫೆಸರ್ ಲ.ಡಾ.ದುರ್ಗಾ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು ಮಾದರಿ ತಯಾರಿಸುವಾಗ ,ಹೊಸತನವನ್ನು ಬಳಸಿಕೊಳ್ಳುತ್ತಾ,ಹೊಸ ಆವಿಷ್ಕಾರವನ್ನು ಮಾಡುತ್ತಾರೆ.ಇಂತಹ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ಪೂರಕವಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಧನಾತ್ಮಕ ಚಿಂತನೆಯನ್ನು ಮೂಡಿಸಲು ಹೊಸ ಹೊಸ ಆವಿಷ್ಕಾರವನ್ನು ಮಾಡಲು ಸ್ಪರ್ಧೆಯು ಪ್ರೇರಣೆಯಾಗಲಿದೆ ಎಂದು ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾದ ಲ.ಕೆ.ಸತ್ಯ ಶಂಕರ್ ಶೆಟ್ಟಿ ತಿಳಿಸಿದರು.
ವೇದಿಕೆಯಲ್ಲಿ ಸ್ಪರ್ಧೆಯ ತೀರ್ಪುಗಾರರಾಗಿರುವ ವಿದ್ಯಾವರ್ಧಕ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ನೇಹಾ ವಿ ಜೈವಂತ್ ,ಸಂತ ಜೋಸೆಫರ ಪ್ರೌಢಶಾಲೆಯ ಗಣಿತ ಹಾಗೂ ವಿಜ್ಞಾನ ಶಿಕ್ಷಕಿ ಸ್ವಾತಿ ಕುಲಾಲ್,ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ.ಯಶವಂತ ಆಚಾರ್ಯ, ಮುಂಡ್ಕೂರು ಕಡಂದಲೆ ಲಯನ್ಸ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಲ.ಡಾ.ಎ.ರಾಜಾರಾಮ್ ರೈ, ಸತೀಶ್ ಪ್ರಭು, ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್.ಕೆ ಉಪಸ್ಥಿತರಿದ್ದರು.
ಆಶ್ನಾ ಸ್ವಾಗತಿಸಿ, ಶಾನ್ಸಾಯಿ ವಂದನಾರ್ಪಣೆ ಗೈದರು. ಭವಿಷ್ ಕಾರ್ಯಕ್ರಮ ನಿರೂಪಿಸಿದರು.