Sunday, July 14, 2024
Homeರಾಜ್ಯಜೂ. 23 ರಂದು ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ, “ಭಾವ ಸಂಗಮ”ದಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಸಾಧಕ...

ಜೂ. 23 ರಂದು ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ, “ಭಾವ ಸಂಗಮ”ದಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಸಾಧಕ ಸಿರಿ” ರಾಜ್ಯ ಪ್ರಶಸ್ತಿಗೆ ಆಯ್ಕೆ

ದಾವಣಗೆರೆ : ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ ಮತ್ತು ಭಾವ ಸಂಗಮ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ
ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ದಿನಾಂಕ 23-06- 2024ನೇ ಭಾನುವಾರ ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳಿ ಸಭಾಂಗಣದ ಶ್ರೀ ಸಿದ್ದವನಹಳ್ಳಿ ಕೃಷ್ಣಮೂರ್ತಿ ವೇದಿಕೆಯಲ್ಲಿ ದಾವಣಗೆರೆ ಕಲಾಕುಂಚ, ಯಕ್ಷರಂಗ, ಸೇರಿದಂತೆ ವಿವಿಧ ಸಂಘಟನೆಗಳ ರೂವಾರಿ ನಿರಂತರವಾಗಿ ನಾಲ್ಕು ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ, ಅಧ್ಯಾತ್ಮ, ವಿಶಾಲ ಮನೋಭಾವನೆಯ ಸಮಾಜ ಸೇವೆಗಳನ್ನು ಗುರುತಿಸಿ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಸಾಧಕ ಸಿರಿ” ರಾಜ್ಯ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಗಮದ ಸಂಚಾಲಕರಾದ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ. ಹಗಲು, ರಾತ್ರಿ, ಬಿಡುವಿಲ್ಲದೇ ಕಠಿಣ ಪರಿಶ್ರಮದ ಶೆಣೈಯವರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ವಿತರಿಸುವ ಉಮಾಶಂಕರ ಪ್ರತಿಷ್ಠಾನ ಮತ್ತು ಭಾವ ಸಂಗಮದ ಸರ್ವ ಸದಸ್ಯರು, ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸುತ್ತಾ ಶೆಣೈಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular