Tuesday, December 3, 2024
Homeರಾಜ್ಯಉದ್ಯಮಿ ಎನ್. ರಮೇಶ ದೇವಾಡಿಗ ವಂಡ್ಸೆ ಜೇಸಿ ಸಪ್ತಾಹ ಸಂಭ್ರಮ ಸುಮನಸ- 2024 ಕಾರ್ಯಕ್ರಮದಲ್ಲಿ ಸಾಧನಾಶ್ರೀ...

ಉದ್ಯಮಿ ಎನ್. ರಮೇಶ ದೇವಾಡಿಗ ವಂಡ್ಸೆ ಜೇಸಿ ಸಪ್ತಾಹ ಸಂಭ್ರಮ ಸುಮನಸ- 2024 ಕಾರ್ಯಕ್ರಮದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

ಎನ್. ರಮೇಶ ದೇವಾಡಿಗ ವಂಡ್ಸೆ 2004ರಲ್ಲಿ ಬೆಂಗಳೂರಿನಲ್ಲಿ ಹಿಂಡ್ ಪ್ಯಾಕ್ ಕಂಪನಿಯನ್ನು ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿರುತ್ತೀರಿ. ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್‌ ನಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಾವು ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿರುತ್ತೀರಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರದಲ್ಲಿನ ತಮ್ಮ ಈ ಅಮೂಲ್ಯ ಸೇವೆಯನ್ನು ಗುರುತಿಸಿ, ಜೇಸಿ ಸಂಸ್ಥೆಯು ನೀಡುವ 2024ರ ಪ್ರತಿಷ್ಠಿತ ‘ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಜರುಗಿದ ವಿಂಶತಿ ಸಂಭ್ರಮ ‘ಸುಮನಸು 2024’ ರ ಜೇಸಿ ಸಪ್ತಾಹದಲ್ಲಿ ಹಲವಾರು ಗಣ್ಯರು ಉಪಸ್ಥಿತಿಯಲ್ಲಿ’ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಾಗೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವರಾಜ ಅರಸು ಜಯಂತೋತ್ಸವ ಪ್ರಯುಕ್ತ ಕೊಡಲ್ಪಡುವ ಹಿಂದುಳಿದ ವರ್ಗಗಳ ರತ್ನ ಡಿ.ದೇವರಾಜ್ ಅರಸು ರಾಜ್ಯ ಪ್ರಶಸ್ತಿಯನ್ನು ಸೆ.20 ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿನಗರ ಶಿವಾನಂದ ಸರ್ಕಲ್ ಬೆಂಗಳೂರಿನಲ್ಲಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನೀಡಲಾಗುವುದು.

ಮನೋರಂಜನೆ ಕಾರ್ಯಕ್ರಮವಾಗಿ ಜೇಸಿ ಯಕ್ಷೋತ್ಸವ “ರಾಣಿ ಶಶಿಪ್ರಭೆ” ಜೇಸಿ ಕಲಾವಿದರಿಂದ ನಡೆಯಿತು.

ಮುದ್ದುಕೃಷ್ಣ ಸ್ಪರ್ಧೆ ಮುದ್ದು ರಾಧೆ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಸನ್ಮಾನಿತರಾದ ಎನ್ ರಮೇಶ್ ದೇವಾಡಿಗ ಅವರು ಮಾತನಾಡಿ ಜೇಸಿಐ ಉಪ್ಪುಂದ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಹೀಗೆ ಇವರ ಸಮಾಜಮುಖಿ ಕಾರ್ಯಕ್ರಮ ಮುಂದುವರೆಯಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಜೇಸಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಸ್ನೇಹಿತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular