ಶ್ರೀ ಕೃಷ್ಣ ಶಿಶುಮಂದಿರ ಕಂದೂರು ಸಜೀಪ ಮೂಡ ಶುಕ್ರವಾರದಂದು ಸುರೇಶ್ ಪೂಜಾರಿ ಸಾರ್ ತಾವು ಅಧ್ಯಕ್ಷತೆಯಲ್ಲಿ ವಾರ್ಷಿಕೋತ್ಸವ ಜರಗಿತು. ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತೀಯ ಸಂಸ್ಕೃತಿ ಪರಂಪರೆ ದೈನಂದಿನ ಜೀವನದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಮೈಗೂಡಿಸಿಕೊಳ್ಳಲು ಶಿಶುಮಂದಿರ ಪ್ರೇರಣೆಯನ್ನು ನೀಡುತ್ತದೆ. ತಮ್ಮ ಚಿಕ್ಕ ಮಕ್ಕಳನ್ನು ಶಿಶು ಮಂದಿರಕ್ಕೆ ಕಳುಹಿಸುವುದರ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು ಶ್ರೀ ರಮೇಶ್ ನಾಯಕ್ ಪ್ರಧಾನ ಕಾರ್ಯದರ್ಶಿ ಆಫೀಸರ್ಸು ಯಶೋಷಿಯೇಷನ್ ಆರ್ಗನೈಸೇಷನ್ ಕೆನರಾ ಬ್ಯಾಂಕ್, ಮಂಗಳೂರು ಮಾತನಾಡಿ ನಮ್ಮ ಸಂಸ್ಕಾರ ಶಿಸ್ತು ಉತ್ತಮ ನಡತೆ ಶಿಶುಮಂದಿರದ ಮೂಲಕ ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ ಎಂದರು. ಡಾ. ಎಂ. ಜಯಪ್ರಕಾಶ್ ಮಯ್ಯ ಗೌರವ ಪ್ರಾಧ್ಯಾಪಕರು ಮತ್ತು ಇಲಾಕ ಮುಖ್ಯಸ್ಥರು ವೈದ್ಯಕೀಯ ವಿಜ್ಞಾನ ಕಾಲೇಜು ಭರತ್ ಪುರ ನೇಪಾಳ ಮಾತನಾಡಿ ಚಿಕ್ಕಪ್ರಾಯದಲ್ಲಿ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಿಕೊಟ್ಟರೆ ಮುಂದೆ ಅವರು ಒಳ್ಳೆಯ ನಾಗರಿಕರಾಗುತ್ತಾರೆ ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾ ಜಿ. ಸಜೀಪ ಮಾಗಣಿ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಲಕ್ಷ್ಮಿ ನಾರಾಯಣ ಭಟ್ ಪದ್ಯಾಣ ಜಯ ಶಂಕರ ಬಾಸ್ರೀ ತಾಯ ಸುಬ್ರಾಯ ಕಾರಂತ ಸುರೇಶ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.