Monday, January 20, 2025
Homeಬಂಟ್ವಾಳಸಜೀಪ ಮೂಡ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಸಜೀಪ ಮೂಡ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಸಜೀಪ ಮೂಡ: ಶ್ರೀಕೃಷ್ಣ ಶಿಶು ಮಂದಿರ ಕಂದೂರು ಸಜೀಪ ಮೂಡದಲ್ಲಿ ಯುವಶಕ್ತಿ ಸೇವಾ ಪತ ವತಿಯಿಂದ ಕೊಡ ಮಾಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೆರವೇರಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಶಿಶು ಮಂದಿರ ಆರಂಭಿಸಿದ ಅಜಿತ್ ಕುಮಾರ್ ಪುಣ್ಯತಿಥಿ ಅಂಗವಾಗಿ ಅವರ ಸೇವ ಕಾರ್ಯವನ್ನು ಲಕ್ಷ್ಮೀನಾರಾಯಣ ಭಟ್ ಪದ್ಯಾನ ಸ್ಮರಿಸಿದರು. ಸ್ಕ್ಯಡ್ಸ್ ಅಧ್ಯಕ್ಷ ಕೆ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಸೀನಿಯರ್ ಆಫೀಸರ್ ರಮೇಶ್ ನಾಯಕ್, ಗುರುದೇವಾನಂದ ಸಹಕಾರಿ ಸಂಘ ನಿರ್ದೇಶಕರಾದ ಅಶೋಕ್ ಕುಮಾರ್, ಯುವಶಕ್ತಿ ಸೇವಾ ಪದದ ಪ್ರವೀಣ್ ಶಾಲೆ, ರಂಜಿತ ಸುವರ್ಣ, ದಿನೇಶ್ ಬಡೆಗೋಡು, ಶಿಶುಮಂದಿರದ ಪದಾಧಿಕಾರಿಗಳಾದ ಜಯಶಂಕರ ಬಾಸ್ರೀ ತಾಯ, ಸುಬ್ರಾಯ ಕಾರಂತ, ಸುರೇಶ್ ಬಂಗೇರ, ವಿಜಯಲಕ್ಷ್ಮೀ, ಸೋಮನಾಥ, ಸುಮತಿ, ರತ್ನಾವತಿ, ಅನಿತಾ, ಮಾತಾಜಿ ರಕ್ಷಿತ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular