ಸಜೀಪ ನಡು: ಒಂದು ವಾರಗಳ ಪರ್ಯಂತ ಶ್ರೀಮದ್ ಭಾಗವತ ಸಪ್ತಾಹ

0
62

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಒಂದು ವಾರಗಳ ಪರ್ಯಂತ ವೀಣಾ ಬನ್ನಂಜೆ ಇವರಿಂದ ಜರಗಲಿರುವ ಶ್ರೀಮದ್ ಭಾಗವತ ಸಪ್ತಾಹ ಸೋಮವಾರದಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲನಗೊಳಿಸಿ ಇಂತಹ ಪುಣ್ಯ ಕಾರ್ಯಗಳು ದೇವಸ್ಥಾನಗಳಲ್ಲಿ ಜರಗಿ ಭಕ್ತರು ಭಕ್ತಿ ಮಾರ್ಗದಲ್ಲಿ ನಡೆಯುವಂತಾಗುತ್ತದೆ ಎಂಬುದಾಗಿ ಶುಭ ಹಾರೈಸಿದರು.

ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಮಾತನಾಡಿ ಹಿಂದುಗಳಿಗೆ ದಾರಿದೀಪವಾಗುವಂತಹ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳಲ್ಲಿ ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು..

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಕೆ ರಾಧಾಕೃಷ್ಣ ಆಳ್ವ ಶ್ರೀ ನಾಲ್ಕಾತಾಯ ದೈವದ ಪಾತ್ರಿ ಶಂಕರ ಪೂಜಾರಿ ಯಾನೆ ಕೊಚ ಪೂಜಾರಿ ನೋಣಯ್ಯ ನ ಲೀಕೆ ಮೊದಲಾದವರು ಉಪಸ್ಥಿತರಿದ್ದರು ಪ್ರಥಮ ದಿನದ ಕಾರ್ಯಕ್ರಮ ಅನ್ನದಾನದೊಂದಿಗೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here