ಶ್ರೀ ಕಲ್ಲುಟ್ಟಿ ಕಲ್ಕುಡ ದೈವಸ್ಥಾನ ಇಡಿ ಪಡ್ಪು ಸಜೀಪ ಮಾಗಣೆ ವರ್ಷಾವಧಿ ಕೋಲ ಉತ್ಸವ ಅಂಗವಾಗಿ ಪುಣ್ಯಾಹ ಪಂಚಗವ್ಯ ಗಣ ಯಾಗ ನವಕ ಕಲಶಾಭಿಷೇಕ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಥಾ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಶುಕ್ರವಾರದಂದು ಜರಗಿತು. ಅನ್ನದಾನ ನಾಟಕ ಕಾರ್ಯಕ್ರಮ ವಾರ್ಷಿಕೋತ್ಸವದ ಅಂಗವಾಗಿ ಜರಗಿತು. ಮುಳ್ಳಂ ಜವೆಂಕಟೇಶ್ವರ ಭಟ್ ಜಿ ರಾಮಕೃಷ್ಣ ಭಟ್ ಸದಾಶಿವ ಶೇಕ. ಕೆ ರಾಧಾಕೃಷ್ಣ ಆಳ್ವ ಕಿಶನ್ ಸೇನಾವ ಮನೋರಂಜನ್ ಶೇಖ ನಿತಿನ್ ಅರಸ ಪ್ರದೀಪ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.