ಬಂಟ್ವಾಳ: ಇಲ್ಲಿನ ಸಜಿಪಮುನ್ನೂರು ಗ್ರಾಮದ ಶಾರದಾನಗರ ಶ್ರೀ ಶಾರದಾ ಯುವಕ ಸಂಘದ ವತಿಯಿಂದ ಸೋಮವಾರ ಆರಂಭಗೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಮಾಗಣೆ ತಂತ್ರಿ ಎಂ.ಸೂರ್ಯನಾರಾಯಣ ಭಟ್ ಚಾಲನೆ ನೀಡಿದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅರ್ಚಕ ತಿಮ್ಮಪ್ಪ, ಪ್ರಮುಖರಾದ ಶಂಕರ ಯಾನೆ ಸುನಿತ್ ಪೂಜಾರಿ, ಸುಂದರ ಪೂಜಾರಿ, ಪ್ರವೀಣ ಗಟ್ಟಿ, ಸುಂದರ ಪೂಜಾರಿ, ಸಂದೀಪ್ ಮಾರ್ನಬೈಲು, ಸರೋಜಿನಿ, ಸಮಿತಿ ಅಧ್ಯಕ್ಷ ಪರಮೇಶ್ವರ ಶಾರದಾನಗರ, ಗೌರವಾಧ್ಯಕ್ಷ ತಿಮ್ಮಪ್ಪ ಬೆಳ್ಚಡ, ದಿನೇಶ ಕುಲಾಲ್, ಉಪಾಧ್ಯಕ್ಷ ಯೋಗೀಶ ಕುಲಾಲ್, ಕಾರ್ಯದರ್ಶಿ ವಿನಯ ಕುಮಾರ್, ಲೆಕ್ಕಪರಿಶೋಧಕ ವಿಜೇಶ್ ಪೂಜಾರಿ, ಪ್ರಸಾದ್ ಪೂಜಾರಿ, ಕೋಶಾಧಿಕಾರಿ ಕಾರ್ತಿಕ್ ಕುಲಾಲ್, ಜೊತೆ ಕಾರ್ಯದರ್ಶಿ ಸಂದೀಪ್ ಬೆಳ್ಚಡ, ಕ್ರೀಡಾ ಸಂಚಾಲಕ ಕಾರ್ತಿಕ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ತಿಲಕ್ ಕೊಪ್ಪಳ, ಪ್ರಸಾದ್ ಬಂಗೇರ ಮತ್ತಿತರರು ಇದ್ದರು.