ದಾವಣಗೆರೆ-ಸೆಪ್ಟೆಂಬರ್,
ದಾವಣಗೆರೆಯ ಗೌಡ ಸಾರಸ್ವತ ಸಮಾಜದ 49ನೇ ವರ್ಷದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಛದ್ಮವೇಷ ಸ್ಪರ್ಧೆಯಲ್ಲಿ ಧುರ್ಯೋಧನನ ಯಕ್ಷಗಾನ ಪಾತ್ರ ಮಾಡಿದ ದಾವಣಗೆರೆಯ ಕಲಾಕುಂಚ ಮತ್ತು ಯಕ್ಷರಂಗದ ಸಂಸ್ಥಾಪಕರು ಯಕ್ಷಗಾನ ಹವ್ಯಾಸಿ ಕಲಾವಿದರು, ಗೌಡ ಸಾರಸ್ವತ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಪ್ರಥಮ ಬಹುಮಾನ ಲಭಿಸಿದೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣಭಟ್ ತಿಳಿಸಿದ್ದಾರೆ.
ಶ್ರೀ ಗಣೇಶೋತ್ಸವದ ವಿಸರ್ಜನಾ ಸಮಾರೋಪ ಸಮಾರಂಭದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀಮತಿ అమితా ভেত. ವೇಣುಗೋಪಾಲ್ ಪೈಯವರ ಅಧ್ಯಕ್ಷತೆಯಲ್ಲಿ ನಗದು ಬಹುಮಾನ ವಿತರಿಸಲಾಯಿತು. ವೇದಿಕೆ ಯಲ್ಲಿ ಉಪಾಧ್ಯಕ್ಷರಾದ ನಿತ್ಯಾನಂದ ಕಾಮತ್, ಖಜಾಂಚಿ ಆರ್.ವಿ.ಶೆಣೈ, ಸಹ ಕಾರ್ಯದರ್ಶಿ ಕಿರಣ್ ಕುಮಾರ್ ಶೆಣೈ, ಸಮಿತಿ ಸದಸ್ಯರಾದ ರಾಘವೇಂದ್ರ ಕಾಮತ್, ಕೀರ್ತಿಕಿಣಿ, ಗಣೇಶ್ ಜಿ.ತಿಲ್ವೆ, ಶ್ರೀಮತಿಯರಾದ ರೇಖಾ ಡಿ.ಪ್ರಭು, ಉಷಾ ವಾಲವಾಲ್ಕರ್ ಮುಂತಾದವರು ಉಪಸ್ಥಿತರಿದ್ದರು.“ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ” ಎಂದೇ ಪ್ರಖ್ಯಾತರಾದ ಶೆಣೈಯವರಿಗೆ ದಾವಣಗೆರೆಯ ಗೌಡ ಸಾರಸ್ವತ ಸಮಾಜ, ದಾವಣಗೆರೆಯ ಕಲಾಕುಂಚ ಮತ್ತು ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಪದಾಧಿಕಾರಿಗಳು, ಸರ್ವ ಸದಸ್ಯರು, ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.