ಲಕ್ನೊ: ಸೆಲೂನ್ ಒಂದರಲ್ಲಿ ಫೇಸ್ ಮಸಾಜ್ ಮಾಡುವಾಗ ಕ್ಷೌರಿಕನೊಬ್ಬ ಎಂಜಲು ಉಗುಳಿ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಆತನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿರುವುದಲ್ಲದೆ, ಆತನ ಅಂಗಡಿಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಕನೌಜ್‌ನಲ್ಲಿರುವ ಸೆಲೂನ್‌ನಲ್ಲಿ ಗ್ರಾಹಕರೊಬ್ಬರು ಕಟಿಂಗ್ ಮಾಡಿಸಿದ್ದಾರೆ. ಅದಾದ ಬಳಿಕ ಮುಖಕ್ಕೆ ಮಸಾಜ್ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಈ ವೇಳೆ ಮಸಾಜ್ ಮಾಡುತ್ತಾ ಕ್ಷೌರಿಕನು ತನ್ನ ಕೈಗೆ ಎಂಜಲು ಉಗುಳಿ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದಾನೆ. ಅಲ್ಲದೆ ತನ್ನ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಕೊನೆಗೆ ಗ್ರಾಹಕನಿಗೆ ಕ್ಷೌರಿಕ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಇದಾದ ಬಳಿಕ ಕ್ಷೌರಿಕನ ಮೊಬೈಲ್ ಪರಿಶೀಲಿಸಿದಾಗ ಆತನ ನಿಜ ಬಣ್ಣ ಬಯಲಾಗಿದೆ.
ಘಟನೆಯ ಬಳಿಕ ಕ್ಷೌರಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಗ್ರಾಹಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಯೂಸುಫ್‌ನನ್ನು ಬಂಧಿಸಿದ್ದಾರೆ. ಆತನ ಅಂಗಡಿಯ ಸಿಸಿಕ್ಯಾಮೆರಾದಲ್ಲಿ ಪೊಲೀಸರು ಪರಿಶೀಲಿಸಿದ್ದಾರೆ.
ಯೂಸುಫ್ ಈ ದುಷ್ಕೃತ್ಯ ಎಸಗಿರುವುದು ದೃಢಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಆತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಆತನಿದ್ದ ಅಂಗಡಿಯನ್ನೇ ಜಿಲ್ಲಾಡಳಿತ ನೆಲಸಮ ಮಾಡಿದೆ. ಕಾನೂನು ಬಾಹಿರ ಸ್ಥಳದಲ್ಲಿ ಯೂಸುಫ್ ಸೆಲೂನ್ ನಡೆಸುತ್ತಿದ್ದ ಎನ್ನಲಾಗಿದೆ. ಒಬ್ಬ ಕ್ಷೌರಿಕನ ಈ ನೀಚ ಕೃತ್ಯದಿಂದ ಸೆಲೂನ್‌ಗೆ ಹೋಗಿ ಫೇಸ್ ಮಸಾಜ್ ಮಾಡಲು ಜನ ಹಿಂದೆಮುಂದೆ ನೋಡುವಂತಾಗಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…