ಮಂಗಳೂರು: ಸ್ಯಾಮ್‌ಕೋ ಅಸೆಟ್ ಮ್ಯಾನೇಜ್ ಮೆಂಟ್ ಸಂಸ್ಥೆಯು ದೊಡ್ಡ ಕ್ಯಾಪ್ ಸ್ಟಾಕ್‌ಗಳಲ್ಲಿ ಹೂಡಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಒಂದು ಓಪನ್ ಈಕ್ವಿಟಿ ಯೋಜನೆ ಆಗಿರುವ ಸ್ಯಾಮ್‌ಕೋ ಲಾರ್ಜ್ ಕ್ಯಾಪ್ ಫಂಡ್‌ಗೆ ನ್ಯೂ ಫಂಡ್ ರಿಯಾತಿ ಅನಾವರಣ ಮಾಡಿದೆ. ಎನ್‌ಎಫ್‌ಓ ಮಾ. 5ರಿಂದ ಮಾ.19 ರವರೆಗೆ ಚಂದಾದಾರಿಕೆಗೆ ಲಭ್ಯವಿರುತ್ತದೆ.
ಈ ಫಂಡ್ ಉನ್ನತ100 ಲಾರ್ಜ್ ಕ್ಯಾಪ್ ಕಂಪನಿಗಳ ವೈವಿಧ್ಯಮಯ ವೇದಿಕೆಯನ್ನು ನಿರ್ಮಿಸುವ ಮೂಲಕ ದೀರ್ಘಕಾಲೀನ ಸಂಪತ್ತು ಗಳಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉತ್ತಮ ಗುಣಮಟ್ಟದ, ಬೆಳವಣಿಗೆ ಆಧರಿತ ಅವಕಾಶಗಳನ್ನು ಪಡೆಯಲು ಸ್ಯಾಮ್‌ಕೋ ಸ್ವಾಮ್ಯದ ಸಿ.ಎ.ಆರ್.ಇ. ಮೊಮೆಂಟಮ್ ತಂತ್ರವನ್ನು ಬಳಸಲಾಗುತ್ತಿದೆ.ಲಾರ್ಜ್ ಕ್ಯಾಪ್ವಿಭಾಗವು ಮಾರುಕಟ್ಟೆ ಏರಿಳಿತಗಳ ನಡುವೆ ಸ್ಥಿರತೆ ಮತ್ತು ಸ್ಥಿರ ಲಾಭವನ್ನು ನೀಡುವ ಹೂಡಿಕೆಯ ಆದ್ಯತೆಯ ಮಾರ್ಗವಾಗಿ ಬೆಳೆದಿದೆ. ದೇಶದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿರುವಾಗ, ಲಾರ್ಜ್ ಕ್ಯಾಪ್ ಫಂಡ್ ಗಳು ದೃಢವಾದ ಮೂಲಭೂತ ವಿಚಾರಗಳ ಆಧಾರ ಹೊಂದಿರುವ ಸ್ಥಾಪಿತ ವ್ಯವಹಾರಗಳ ಬೆಂಬಲದಿಂದ ಉತ್ತಮ ಸ್ಥಿರತೆಯನ್ನು ಪ್ರದರ್ಶಿಸಿವೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿರಾಜ್ ಗಾಂಧಿ ತಿಳಿಸಿದರು.