ಯಾದಗಿರಿ ಜಿಲ್ಲೆಯ ಸುರಪುರ ನಗರದ ಬೇಕರಿಯೊಂದರಲ್ಲಿ ಸಿದ್ಧಪಡಿಸಲಾಗಿರುವ ಕೇಕ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ಕೇಕ್ ಮೂಲಕ ಜಿಲ್ಲೆಯಲ್ಲಿನ ಮರಳು ದಂಧೆ ಅನಾವರಣವಾಗಿದೆ ಎನ್ನಲಾಗಿದೆ. ಸುರಪುರದಲ್ಲಿ ಮರಳು ದಂಧೆ ನಡೆಸುವ ಪ್ರಭಾವಿಯೊಬ್ಬನ ಹುಟ್ಟು ಹಬ್ಬಕ್ಕೆ ಈ ಕೇಕ್ ತಯಾರಿಸಲಾಗಿದೆಯಂತೆ. ಮರಳು ಅಡ್ಡೆ, ಟಿಪ್ಪರ್ ಮತ್ತು ಜೆಸಿಬಿ ಇಟ್ಟು ಕೇಕ್ ತಯಾರಿಸಲಾಗಿದೆ. ಮರಳು ಅಡ್ಡೆಯಲ್ಲಿ ಟಿಪ್ಪರ್ಗೆ ಮರಳು ತುಂಬುವುದು, ನಂತರ ಮರಳು ಸಾಗಾಟ ಮಾಡುವ ಬಗ್ಗೆ ಕೇಕ್ ಮೂಲಕ ತಿಳಿಸಲಾಗಿದೆ. ಮರಳು ದಂಧೆಯ ಕೇಕ್ ಸುರಪುರ ನಗರದಾದ್ಯಂತ ಸಾಕಷ್ಟು ಸದ್ದು ಮಾಡಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.