ಬೆಳ್ತಂಗಡಿ: ನದಿಗಳಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಿಸುತ್ತಿದ್ದ ಲಾರಿಗಳ ವಿರುದ್ಧ ಬೆಳ್ತಂಗಡಿ ತಹಾಶೀಲ್ದಾರ್ ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಿಂದ ಅಕ್ರಮ ಮರಳು ತುಂಬಿಕೊಂಡು ಕಕ್ಕಿಂಜೆ ಕಡೆಗೆ ಸಾಗಾಟ ಮಾಡುತ್ತಿದ್ದ ಒಂದು ಲಾರಿ ಮತ್ತು ಟೆಂಪೋವನ್ನು ಬೆಳ್ತಂಗಡಿ ಶಾಸಕ ಪ್ರಥ್ವಿ ಸಾನಿಕಂ ಮತ್ತು ತಂಡ ವಶಕ್ಕೆ ಪಡೆದು, ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ತಹಾಶೀಲ್ದಾರ್ ವರದಿ ಸಲ್ಲಿಸಿದ್ದಾರೆ.