ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ಬಳಿಯ ಡ್ಯಾಂ ಬಳಿಯಿಂದ ಅಕ್ರಮವಾಗಿ ಮರಳು ಸಾಗಾಟಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಹಾಕಲಾಗಿರುವ ಬ್ಯಾರೇಜ್ ಕಂ ಡ್ಯಾಂನ ಎದುರು ಭಾಗದಿಂದ ಮರಳು ತೆಗೆಯುವ ಉದ್ದೇಶದಿಂದ ನದಿಯಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಮತ್ತು ಹಿಟಾಚಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನದಿ ಭಾಗದಲ್ಲಿ ಸುಮಾರು ಏಳು ಟಿಪ್ಪರ್ ಲೋಡ್ ಮರಳು ರಾಶಿ ಹಾಕಲಾಗಿದೆ. ಮರಳು ತೆಗೆಯಲು ಬಳಸಿದ ಸಾಮಾಗ್ರಿಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಬ್ದುಲ್ ಮುತಾಲಿಬ್ ಯಾನೆ ನಾವುರ ಪುತ್ತ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.