ಬಾಲಿವುಡ್ನಲ್ಲಿ ನಡೆಯುವ ಮದುವೆಗಳು ಸದಾ ಪತ್ರಿಕೆ, ಟಿವಿ ಮಾಧ್ಯಮಗಳ ಹೆಡ್ಲೈನ್ಗಳಾಗಿ ಬಿಡುತ್ತವೆ. ಕೆಲವೊಮ್ಮೆ ಅದ್ಧೂರಿ ಮದುವೆಗಳು ಹಾಗೂ ಕೆಲವೊಮ್ಮೆ ಅತ್ಯಂತ ಸರಳವಾಗಿ ಆಗಿರುವ ಮದುವೆಗಳು, ಒಟ್ಟಿನಲ್ಲಿ ಬಾಲಿವುಡ್ ಅಂಗಳದಲ್ಲಿ ಎಂತಹುದೇ ಮದುವೆಗಳು ನಡೆದರೂ ಅದು ಚರ್ಚೆಗೆ ಗ್ರಾಸವಾಗುತ್ತದೆ. ಸದ್ಯ ಬಾಲಿವುಡ್ನ ಹಿರಿಯ ನಟ ಸಂಜಯ್‌ದತ್ ನಾಲ್ಕನೇ ಬಾರಿ ಮದುವೆಯಾಗುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಸದ್ಯ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಬಿಟೌನ್ ಅಂಗಳದಲ್ಲಿ ಮುನ್ನಾಭಾಯ್, ಸಂಜುಬಾಬಾ ಅಂತಲೇ ಕರೆಸಿಕೊಳ್ಳುವ ಸಂಜಯ್‌ದತ್ ತಮ್ಮ 65ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿ ಸುದ್ದಿಯಾಗಿದ್ದಾರೆ. ಆದರೆ ಸಂಜಯ್ ದತ್ತರನ್ನು ಮದುವೆಯಾದ ವಧು ಯಾರು ಅಂತ ನೋಡಿದ್ರೆ, ಅದು ಮತ್ಯಾರೂ ಅಲ್ಲ, ಈಗಾಗಲೇ ಸಂಜುಬಾಬಾನ ಮೂರನೇ ಹೆಂಡತಿಯಾಗಿ ಕೈಹಿಡಿದಿದ್ದ ಮಾನ್ಯತಾ ದತ್.
ಸದ್ಯ ಸಂಜಯ್ ದತ್ ಹಾಗೂ ಮಾನ್ಯತಾ ದತ್ ಹವನ ಕುಂಡದ ಸುತ್ತ ಏಳು ಹೆಜ್ಜೆಯನ್ನಿಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಏನಿದು ವಿಚಾರ ಅಂತ ನೋಡಿದಾಗ ಇತ್ತೀಚೆಗೆ ಸಂಜಯ್ ದತ್ ತಮ್ಮ ಮನೆಯನ್ನು ನವೀಕರಣಗೋಳಿಸಿದ್ದಾರೆ. ಹೀಗಾಗಿ ಮನೆಯಲ್ಲೊಂದು ಪೂಜೆಯನ್ನಿಟ್ಟುಕೊಂಡಿದ್ದಾರೆ. ಇದೇ ವೇಳೆ ಸಂಜಯ್ ದತ್ ಹಾಗೂ ಮಾನ್ಯತಾ ಮದುವೆಯಾಗಿ 16 ವರ್ಷಗಳು ಕೂಡ ತುಂಬಿದ್ದರಿಂದ ಈ ಜೋಡಿ ಮತ್ತೊಮ್ಮೆ ಮದುವೆಯಾಗಿದೆ. ಮದುವೆಯಲ್ಲಿ ನಡೆಯುವ ಸಾಂಪ್ರದಾಯದಂತೆ ಇಬ್ಬರು ಹೋಮ ಕುಂಡದ ಸುತ್ತ ಏಳು ಹೆಜ್ಜೆಯನ್ನಿಟ್ಟಿದ್ದಾರೆ.
ಸಂಜಯ್‌ದತ್ ಕೇಸರಿ ಬಣ್ಣದ ಕುರ್ತಾ ಹಾಗೂ ದೋತಿ ಮತ್ತು ಅದೇ ಬಣ್ಣದ ಶಾಲ್ ಹಾಕಿಕೊಂಡು ಹೋಮದಲ್ಲಿ ಭಾಗವಹಿಸಿದ್ದರೆ, ಮಾನ್ಯತಾ ಬಿಳಿ ಬಣ್ಣದ ಚೂಡಿಯುಟ್ಟು ಹೋಮಹವನದಲ್ಲಿ ಭಾಗಿಯಾಗಿದ್ದರು. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.