ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತೇಜನ ನೀಡುವ ಸಲುವಾಗಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪುರಸಭಾ ಸದಸ್ಯರೂ ಆಗಿರುವ, ಶ್ರೀ ಪಿ. ಕೆ. ಥೋಮಸ್ ಇವರ ಪ್ರಾಯೋಜಕತ್ವದಲ್ಲಿ ಹೊಸ ಕ್ರೀಡಾ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮ ಜರಗಿತು . ವಿದ್ಯಾರ್ಥಿಗಳಲ್ಲಿ ಕ್ರೀಡಾ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಲು ಈ ಕಾರ್ಯಕ್ರಮವು ಮಹತ್ವಪೂರ್ಣವಾಗಿದೆ ಎಂದು ಶಾಲೆಯ ಸಂಚಾಲಕರಾದ ಫಾ. ಮೆಲ್ವಿನ್ ನೊರೋನ್ಹಾ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀ. ಪಿ. ಕೆ ಥೋಮಸ್ ರವರು ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿ ಪ್ರೊತ್ಸಾಹಿಸಿದರು.
ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಿಲ್ವಿಯಾ ಡೇಸಾ ,ದೈಹಿಕ ಶಿಕ್ಷಕರಾದ ಶ್ರೀ. ಉದಯ ಸರ್, ಹಾಗೂ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಲ್ಫೋನ್ಸಾ ಜೋಸೆಫ್ ಇವರು ಕಾರ್ಯಕ್ರಮ ನಿರೂಪಿಸಿದರು.